ಉಜಿರೆ: ದೀಪಾವಳಿ ಹಬ್ಬದ ಪ್ರಯುಕ್ತ ಪರ್ಬೊದ ಗೊಬ್ಬು ಕಾರ್ಯಕ್ರಮದಲ್ಲಿ ಮಾಣಿಕ್ಕೆ ಕುಟುಂಬಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ವಿತರಣೆ ನ.12ರಂದು ಮಣಿಕ್ಕೆ ಮನೆಯ ವಠಾರದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಿನೇಶ್ ಪೂಜಾರಿ ಹೊಕ್ಕಿಲ ಅವರು ಮಾತನಾಡಿ ಈ ಕುಟುಂಬ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರಿರುವುದು ತುಂಬಾ ಸಂತೋಷವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.ಮುಂದಿನ ದಿನಗಳಲ್ಲಿ ಅತೀ ಹೆಚ್ಚಿನ ಕಾರ್ಯವನ್ನು ಕುಟುಂಬದಲ್ಲಿ ಮಾಡುವಂತಾಗಲಿ ದೈವ ದೇವರುಗಳ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೋಹನ್ ಪೂಜಾರಿ ಮಾತನಾಡಿ ಕುಟುಂಬ ಸ್ಪರ್ಧೆಯ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು.ಲಾಯಿಲ ರಂಜಿತ್ ಇಂಡಸ್ಟ್ರಿಯ ಮಾಲಕ ದಿನೇಶ್ ಪೂಜಾರಿ, ಮಣಿಕೆ ಊರಿನ ಹಿರಿಯರಾದ ಗಿರಿಜಾ, ಆನಂದ ಪೂಜಾರಿ, ಯೋಗೀಶ್ ಪೂಜಾರಿ, ಶೇಖರ್ ಪೂಜಾರಿ, ಕೋಶಾಧಿಕಾರಿ ಗಣೇಶ್ ಮತ್ತು ಸಂಚಾಲಕ ದಾಮೋದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನನ್ಯ ಪಾರ್ನಡ್ಕ ಪ್ರಾರ್ಥಿಸಿದರು. ಶ್ವೇತಾ ಮಣಿಕ್ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಯುವರಾಜ್ ಮಣಿಕ್ಕೆ ವಂದಿಸಿದರು.