ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಪ್ರಚಾರ

0

ಶಿಶಿಲ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಭಿಮಾನಿಯೊಬ್ಬರು ಮತ್ತೆ ಮತ್ತೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ಸಂದೇಶವನ್ನು ಮುದ್ರಿಸಿ, ಮೋದಿ ಪರ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ.

ಶಿಶಿಲ ಗ್ರಾಮದ ದೇನೋಡಿಯ ತಿಲಕ್ ಎಂಬವರು ಯುವ ಬ್ರಿಗೇಡ್‌ನಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರ ಅಭಿಯಾನಿಯಾಗಿರುವ ಇವರು ತಮ್ಮ ಮದುವೆ ಆಮಂತ್ರಣದಲ್ಲಿ ಮದುವೆ ಒಮ್ಮೆ ಮಾತ್ರ.ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು ಏನಂತ್ತೀರಿ..? ಎಂಬ ಸಂದೇಶವನ್ನು ಮುದ್ರಿಸಿ ಎಲ್ಲರ ಗಮನ ಸೆಳೆದಿದ್ದಾರೆ.ಹಾಗೆಯೇ ಮದುವೆ ದಿನ ಮೋದಿಯವರ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಇರುವ ಪ್ಲೆಕ್ಸ್ ಅಳವಡಿಸಿ ಬಂದವರಿಗೆ ಮೋದಿ ಭಾವಚಿತ್ರದ ಕ್ಯಾಲೆಂಡರ್ ನೀಡುವ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here