ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ನ.01ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.ವಿದ್ಯಾರ್ಥಿನಿಯಾದ ಆಲ್ವಿಟ ಡಿಸೋಜ ರವರು ಕನ್ನಡ ರಾಜ್ಯೋತ್ಸವದ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು.

ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದದವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.ವಿದ್ಯಾರ್ಥಿಗಳು ಗೀತ ಗಾಯನವನ್ನು ಹಾಡುವುದರ ಮೂಲಕ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಿದರು.

ವಂ|ಸ್ವಾ| ಸ್ಟ್ಯಾನಿಗೋವಿಯಸ್ ರವರು ಮಾತನಾಡಿ ಕನ್ನಡ ಒಂದು ಸುಂದರವಾದ ಭಾಷೆ, ಕನ್ನಡವನ್ನು ನಾವು ಪ್ರೀತಿಸೋಣ, ಎಲ್ಲಾ ಭಾಷೆಗಳನ್ನೂ ನಾವು ಗೌರವಿಸೋಣ, ಕರ್ನಾಟಕ ಮತ್ತು ಕನ್ನಡದ  ಬಗ್ಗೆ ಪ್ರೀತಿ, ಗೌರವ ಇರಲಿ ಎಂದು ಹೇಳಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಪ್ರಿಯಾ ಶಾಂತಿ ಫೆರ್ನಾಂಡಿಸ್ ರವರು ನಿರೂಪಿಸಿ, ವಿದ್ಯಾರ್ಥಿಯಾದ ಡೆಲ್ವಿನ್ ಫೆರ್ನಾಂಡಿಸ್ ರವರು ಸ್ವಾಗತಿಸಿ, ಲಿಸ್ಟನ್ ಕಾರ್ಲೊ ರವರು ಧನ್ಯವಾದವನ್ನು ಸಮರ್ಪಿಸಿದರು.

p>

LEAVE A REPLY

Please enter your comment!
Please enter your name here