ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ ಪೂಂಜರು ಯಾವ ದೇವಸ್ಥಾನಕ್ಕೆ ಯಾವಾಗ ಕರಿತಾರೋ ಅವರು ನಿಗದಿ ಪಡಿಸಿದ ದಿನಾಂಕದಂದು ನಾನು ಪ್ರಮಾಣಕ್ಕೆ ಸಿದ್ಧ.ನನ್ನ ಮತ್ತು ಅವರ ಕುಟುಂಬದವರು ಪ್ರಮಾಣಕ್ಕೆ ಅಗತ್ಯವಿಲ್ಲ.ನಾನು ಮತ್ತು ಅವರು ಮಾತ್ರ.ಅವರು ಹೇಳಿದ ಯಾವುದೇ ವಿಚಾರಕ್ಕೂ ಪ್ರಮಾಣಕ್ಕೆ ಸಿದ್ಧ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಅವರು ಅ.21 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೆಎಸ್ಆರ್ಟಿಸಿ ಬಸ್ ನ ವಿಚಾರದಲ್ಲಿ ನಾನು ಅಳದಂಗಡಿ ಭಾಗದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮನವಿ ಮಾಡಿದರು.ಮನವಿಯನ್ನು ಉಸ್ತುವಾರಿ ಸಚಿವರೂ ಹಾಗೂ ಸಾರಿಗೆ ಸಚಿವರಿಗೆ ಸಲ್ಲಿಸಿದ್ದು ಹತ್ತು ದಿನದಲ್ಲಿ ಮಂಜೂರಾಗಿದೆ.ಪೂಂಜರು ಬಸ್ಸನ್ನು ಉದ್ಘಾಟಿಸುವುದಾಗಿ ಪತ್ರಿಕೆಯಲ್ಲಿ ತಿಳಿಸಿದರು.ನಾನು ಬೆಂಗಳೂರಿಗೆ ತೆರಳಿ ಬಸ್ಸಿನ ಉದ್ಘಾಟನೆಯನ್ನು ನಿಲ್ಲಿಸಿದ್ದು.ಈ ವಿಚಾರದಲ್ಲಿ ಬಸ್ಸು ಮಂಜೂರು ಮಾಡಿದ್ದು ನಾನೇ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಮಾಣಕ್ಕೆ ಸಿದ್ಧ ಎಂದು ಹೇಳಿದ್ದು ನಿಜ.
2018-19ರಲ್ಲಿ ಬಸ್ಸಿಗಾಗಿ ಅರ್ಜಿ ಸಲ್ಲಿಸಿದ್ದೆ ಎಂದು ಹರೀಶ್ ಪೂಂಜರು ಹೇಳಿದ್ದರು.ಆಗ ಅವರದ್ದೇ ಪಕ್ಷದ ಸರಕಾರ ಇದ್ದಾಗ ಏಕೆ ಮಂಜೂರು ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.
ಗಂಗಾಧರ ಗೌಡರನ್ನು ಕಾಂಗ್ರೆಸ್ ಗೆ ನಾನು ಕರೆದಿಲ್ಲ.ಎ.ಸಿ.ಕುರಿಯನ್ ಅವರ ಒತ್ತಡ ಮೇರೆಗೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರ ಒಪ್ಪಿಗೆ ಪಡೆದು ಸೇರಿಸಿದ್ದು.
ಮಜಾ ರಾಜಕೀಯ ಎಂದರೇನು ಪೂಂಜರೇ ಸ್ಪಷ್ಟೀಕರಣ ನೀಡಿ.ಆಫೀಸ್ ರೂಮ್ ಸ್ಟೂಲ್ ನ್ನು ಬಾಗಿಲಿಗೆ ಜೋಡಣೆ ಮಾಡಿದರೆ ಯಾರಾದ್ರೂ ಬಂದು ನೋಡಿ ಇಂತಹ ರಾಜಕೀಯವನ್ನು ಮಾಡಿಲ್ಲ.ಗೆದ್ದು ಸೋತು ಇಲ್ಲಿಯೇ ರಾಜಕೀಯ ಮಾಡಿದ್ದು.ಸುಳ್ಳು ವಿಚಾರಗಳನ್ನು ಪತ್ರಿಕೆಗೆ ತಿಳಿಸಬೇಡಿ.ಪೂಂಜರು ಬೆಂಗಳೂರಿಗೆ ಬರುವುದಾದರೆ ನನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ.ಅವರು ಹೇಳಿದಂತೆ ವಿಧಾನ ಸೌಧದ ಕಂಬಗಳು ಎನು ಹೇಳುತ್ತೆ ಎಂದು ನೋಡುವ.ನಾನು ತಪ್ಪು ಮಾಡಿದಲ್ಲಿ ಪ್ರಾಯಶ್ಚಿತ್ತವಾಗಲಿ.
ಸಕಲೇಶಪುರ ದಾಟಿದ ಮೇಲೆ ನೀವು ಜನವೇ ಬೇರೆ ಎಂದು ನಿಮ್ಮ ಪಕ್ಷದವರು ತಿಳಿಸುತ್ತಾರೆ ಪೂಂಜರೇ, ನಿಮಗೆ ಬೌನ್ಸರ್ಗಳು ಶೋಕಿಯಿದೆ.ನಾನು ಮೂಲ ಕಾಂಗ್ರೆಸ್ಸಿಗರ ಬಾಗಿಲು ತಟ್ಟಿ ಕಾಂಗ್ರೆಸ್ ಗೆ ಬಂದಿದ್ದೇನೆ ಎಂದು ಹೇಳೀದ್ದೀರಿ.ನಾನು ಯಾರ ಮನೆಯ ಬಾಗಿಲು ತಟ್ಟಲು ಹೋಗಲಿಲ್ಲ.ಆ ವಿಚಾರದಲ್ಲಿ ನೀವೇ ನಿಮ್ಮ ಪಕ್ಷದ ಹಿರಿಯರನ್ನು ಮೂಲೆ ಗುಂಪು ಮಾಡಿದ್ದೀರಿ.ಇದರಿಂದ ನಿಮಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ನೆರೆ ಬಂದ ಸಂದರ್ಭದಲ್ಲಿ ಸುಧಾಮೂರ್ತಿ ಅಕ್ಕಿ ನೀಡಿದರು. ಚೀಲಗಳಿಗೆ ನೀವು ಪ್ರತ್ಯೇಕ ಚೀಲ ಮಾಡಿ ನಿಮ್ಮ ಭಾವಚಿತ್ರವುಳ್ಳ ಚೀಲ ಮಾಡಿ ನೀಡಿದ ನೀವು ಸುಧಾಮೂರ್ತಿ ರವರಿಗೆ ಅನ್ಯಾಯ ಮಾಡಿದ್ದೀರಿ.
ಸೌಜನ್ಯ ಪ್ರಕರಣ ಸಂದರ್ಭ ನಿಮ್ಮದೇ ಪಕ್ಷದ ಆಡಳಿತ ಇದ್ದಾಗ ವಿಧಾನಸಭೆಯಲ್ಲಿ ಪ್ರಶ್ನಿಸದೇ ಇದ್ದ ನೀವು ಮತ್ತು ಪ್ರತಾಪಸಿಂಹ ನಾಯಕ್ ಈಗ ವಿಧಾನಸೌಧದ ಹೊರಾಂಡದಲ್ಲಿ ಸಿದ್ಧರಾಮಯ್ಯಗೆ ಮನವಿ ಸಲ್ಲಿಸಿದ್ದೀರಿ.ಐದು ವರ್ಷ ಶಾಸಕರಾಗಿದ್ದಾಗ ಯಾಕೆ ಪ್ರಸ್ತಾಪ ಮಾಡಲಿಲ್ಲ. ಸುಜಾತಾ ಹಂತಕರ ಜೊತೆ ನಾನು ಇದ್ದರೆ ಅವಳ ಅಣ್ಣ ನನ್ನೊಂದಿಗೆ ಇದ್ದಾರೆ. ಅನ್ಯಾಯ ಮಾಡಿದರೆ ನನ್ನೊಂದಿಗೆ ಇರುತ್ತಾರೆಯೇ? ಈಗ ವೇಣೂರು ಠಾಣೆಗೆ ನನ್ನ ತಂಗಿಯ ಮಾನಹಾನಿ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.ಇದರಿಂದ ಸತ್ಯಾಂಸ ಹೊರಬರಬಹುದು.
ಪೂಂಜರು ಹೇಳ್ತಾರೆ ಬಂಗೇರರು ತಹಶೀಲ್ದಾರ್ ಲೆವಲ್ ಎಂದು, ಹಾಗಾದರೆ ಪೂಂಜರೇ ನೀವು ಪ್ರೆಸಿಡೆಂಟ್ ಆಫ್ ಇಂಡಿಯಾ ಲೇವಲೇ? ಎಂದು ಪ್ರಶ್ನಿಸಿದರು.
ಸಾರ್ವಜನಿಕ ಗಣೇಶೋತ್ಸವಕ್ಕೆ 2 ಲಕ್ಷ ರೂಪಾಯಿ ಸೇರಿದಂತೆ ಸಣ್ಣ ಸಣ್ಣ ಕಾರ್ಯಕ್ರಮಗಳಿಗೂ ಪೂಂಜರು ದೇಣಿಗೆಯನ್ನು ನೀಡಿದ ವಿವರಗಳು ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಣವಾಗುತ್ತಿದೆ.ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಲು ಹೇಗೆ ಸಾಧ್ಯ? ಇದು ಎಲ್ಲಿಂದ ಬಂತು.40% ಕಮಿಷನ್ ಇಲ್ಲದೆ ಸಾಧ್ಯವೇ?ಯಾರಾದ್ರೂ ದುಡಿದ ಹಣವನ್ನು ಈ ರೀತಿ ನೀಡುತ್ತಾರೆಯೇ? ಅವರ ಅವಧಿಯಲ್ಲಿ ಮೂರು ಸಾವಿರ ಐನೂರು ಕೋಟಿ ಕಾಮಗಾರಿ ಮಂಜೂರು ಮಾಡಿದ್ದೇನೆ ಎಂದು ಹೇಳಿದ್ದಾರೆ.ಇದು ಸರಕಾರದ ಆದೇಶದಂತೆ ತನಿಖೆಯಾಗಬೇಕು.
ಅವರ ಪತ್ರಿಕಾಗೋಷ್ಠಿಯಲ್ಲಿ ಪೊಟ್ಟು ವಕೀಲ ಎಂದು ಅವಮಾನಿಸಿದ್ದಾರೆ.ನನಗೆ ಹಿರಿಯ ಹಲವಾರು ವಕೀಲರುಗಳು ನನ್ನೊಂದಿಗೆ ಸಹಕರಿಸಿ, ಸಲಹೆ ನೀಡುತ್ತಿದ್ದಾರೆ.ಇವರು ಹೇಳಿದಂತೆ ಪೊಟ್ಟು ವಕೀಲರು ಯಾರೆಂದು ಸ್ಪಷ್ಟನೆ ನೀಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ ಜಯ ವಿಕ್ರಂ ಉಪಸ್ಥಿತರಿದ್ದರು.