ಉಜಿರೆ: ಉಜಿರೆ ಶ್ರೀ ಧ.ಮ.ಕಾಲೇಜು ಮನಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಮಾನಸಿಕ ದಿನಾಚರಣೆಯ ಅಂಗವಾಗಿ ಒಂದು ದಿನದ ರಾಷ್ಟ್ರೀಯ ಮಾನಸಿಕ ಕಾರ್ಯಕ್ರಮ ಮಾನಸಿಕ ಅರೋಗ್ಯ ಕಾರ್ಯಾಗಾರ ಅ.10 ರಂದು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರಗಿತು.
ಖ್ಯಾತ ಮನೋರೋಗ ತಜ್ಞ ನಿವೃತ್ತ ಪ್ರೊಪೇಸರರ್ ಬೆಂಗಳೂರು ಅನೇಕೆರೆ ಸಮಾಧಾನ ಕೇಂದ್ರದ ಸಂಸ್ಥಾಪಕ ಡಾ.ಸಿ.ಆರ್.ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ವಹಿಸಿದ್ದರು. ಜಿ.ಆರ್.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ವಂದನಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಿದ್ಯಾರ್ಥಿ ಸಂಘದ ನಾಯಕಿ ವರ್ಷಾ ವಂದಿಸಿದರು.ಅನುಪ್ರಿಯ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಮನೋತಜ್ಞ ಡಾ.ಸಿ.ಆರ್.ಚಂದ್ರಶೇಖರ್ ರವರನ್ನು ಗೌರವಿಸಲಾಯಿತು.
p>