ದಯಾ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ

0

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಅ.07ರಂದು ಪೋಷಕರ ಸಭೆಯನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿನೋದ್‌ ಮಸ್ಕರೇನ್ಹಸ್‌ ರವರು, ದಯಾ ವಿಶೇಷ ಶಾಲೆಯ ಮುಖ್ಯೋಪಧ್ಯಾಯಿನಿ ದಿವ್ಯಾ, ಪೋಷಕರ ಪ್ರತಿನಿಧಿಯಾಗಿ ಶುಭಕರ್‌ ರವರು ಹಾಗೂ ಅಸೋಸಿಯೇಟ್‌ ಪ್ರೋಫೆಸರ್‌ ಆಳ್ವಾಸ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಮತ್ತು ಪಿ.ಎಚ್.ಡಿ ವಿದ್ವಾಂಸ ನಿಟ್ಟೆ ವಿಶ್ವವಿದ್ಯಾನಿಲಯ ಪುನರ್ವ ಎಂ. ಎಚ್‌ ಅವರು ಭಾಗವಹಿಸಿದ್ದರು.

ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿನೋದ್‌ ಮಸ್ಕರೇನ್ಹಸ್‌ ರವರು ಮಾತನಾಡಿ ಆರೋಗ್ಯದ ದೃಷ್ಠಿಯಂದ ಮಕ್ಕಳನ್ನು ಬಿಟ್ಟುಬಿಡದೇ ಬರುವ ಜ್ವರ-ಕೆಮ್ಮು ಮತ್ತು ಚರ್ಮದ ಅಲರ್ಜಿಗಳು ಬರದಂತೆ ನೋಡಿಕೊಳ್ಳುವುದು ಒಳ್ಳೆಯದು, ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಮಕ್ಕಳಲ್ಲಿ ಅಫೌಷ್ಠಿಕತೆಯ ಕೊರತೆ ಬರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ಸತತವಾಗಿ ಮಕ್ಕಳಿಗೆ ಫೌಷ್ಠಿಕ ಆಹಾರವನ್ನು ಕೊಡುತ್ತಾ ಬಂದಿದೆ, ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ-ಸೌಕರ್ಯವನ್ನು ಒದಗಿಸುತ್ತಾ ಬಂದಿರುತ್ತದೆ. ಪ್ರತಿದಿನ ಮಕ್ಕಳಿಗೆ ಹಾಲು ಕೊಡಬೇಕು, ಇದರಿಂದ ಮಕ್ಕಳ ಆರೋಗ್ಯ ವೃದ್ದಿಯಾಗುತ್ತದೆ ಎಂದರು.ಮುಂಬರುವ ದಿನಗಳಲ್ಲಿ ಒಂದು ವಾರ ದಸರ ರಜೆಯನ್ನು ಕೊಡಲಾಗುವುದು ಅ ದಿನಗಳಲ್ಲಿ ಮಕ್ಕಳಿಗೆ ಕಲಿಕೆ, ಫಿಜಿಯೋ ಥೆರಫಿ ಮತ್ತು ಸ್ಪೀಚ್‌ ತೆರಫಿಯಂತಹ ಚಿಕಿತ್ಸೆಯನ್ನು ಮನೆಯಲ್ಲಿ ಮಕ್ಕಳಿಗೆ ಅಭ್ಯಾಸವನ್ನು ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ಅಸೋಸಿಯೇಟ್‌ ಪ್ರೋಫೆಸರ್‌ ಆಳ್ವಾಸ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಮತ್ತು ಪಿ.ಎಚ್.ಡಿ ವಿದ್ವಾಂಸ ನಿಟ್ಟೆ ವಿಶ್ವವಿದ್ಯಾನಿಲಯ ಪುನರ್ವ ಎಂ. ಎಚ್‌ ಅವರು ಮಾತನಾಡಿ ವಿಶೇಷ ಮಕ್ಕಳಲ್ಲಿ ಕಾಣುವ ಹಲವಾರು ಸಮಸ್ಯೆಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಯಾವ ಚಿಕಿತ್ಸೆಗೆ ಒಳಪಡಿಸಬೇಕು ಎಂದು ತಿಳಿಸಿದರು.ಆರ್ಟೆಸ್ಟಿಕ್‌ ಮಕ್ಕಳಲ್ಲಿ ಕಂಡುಬರುವ ಹೈಪರ್‌ ಆಕ್ಟಿವ್‌ ವರ್ತನೆಯನ್ನು ಕಡಿಮೆ ಮಾಡಲು ಕೆಲವೊಂದು ನ್ಯೂಟ್ರಿಷನ್‌ ಫುಡ್ ಗಳನ್ನು ಕುರಿತು ಮಾಹಿತಿಯನ್ನು ನೀಡಿದರು.ಹಾಗೆಯೇ ಈ ಮಕ್ಕಳಲ್ಲಿ ಕಂಡುಬರುವ ಹಲ್ಲಿನ ಸಮಸ್ಯೆಗಳ ಬಗ್ಗೆಯು ಸಹ ಸಲಯೆಯನ್ನು ನೀಡಿದರು. ಮಕ್ಕಳಿಗೆ ಜಂಕ್‌ ಫುಡ್‌ ಗಳನ್ನು ನೀಡುವುದನ್ನು ನಿಲ್ಲಿಸಬೇಕು ಇದರಿಂದ ಮಕ್ಕಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

ಪೋಷಕರ ಸಭೆಯ ಸ್ವಾಗತ ಮತ್ತು ವಂದನಾರ್ಪಣೆಯನ್ನು ರಮೇಶ್‌ ರವರು ನೆರವೆರಿಸಿದರು.

LEAVE A REPLY

Please enter your comment!
Please enter your name here