ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ, ಬಂಟ್ವಾಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆ, ಅ.2ರಂದು ಬೆಳ್ತಂಗಡಿಯ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಜರುಗಿತು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು.ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆಳ್ತಂಗಡಿ ಹೋಲಿ ರೆಡಿಮ ಚರ್ಚ್‌ನ ಧರ್ಮ ಗುರು ಸ್ವಾಮಿ ವೋಲ್ಟರ್ ಡಿಮೆಲ್ಲೊ ಹೊಸನಗರ ಜುಮ್ಮಾ ಮಸೀದಿಯ ಧರ್ಮಗುರು ಮೌಲಾನ ಅಶ್ರಫ್ ಹಿಮಾಮಿ ಆಶೀರ್ವಚನ ನೀಡಿದರು.ಉಡುಪಿಯ ನ್ಯಾಯವಾದಿ ಸಹನಾ ಕುಂದರ್ ಉಪನ್ಯಾಸ ನೀಡಿದರು.
ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ನವಜೀವನ ಸಾಧಕರಾದ ಲಿಂಗಪ್ಪ ಗೌಡ, ಅಚ್ಚುತ ಆಚಾರ್ಯ, ವಿಶ್ವನಾಥ ಬಸವನಗುಡಿ, ಸುಂದರ, ಬಿರ್ಮಣ ಪೂಜಾರಿ, ಕುಂಜ ಗೌಡ, ಸಂಜೀವ ಗೌಡ ಮತ್ತು ಶೌರ್ಯ ವಿಪತ್ತು ಘಟಕದ ಸಾಧಕರಾದ ಹರೀಶ್ ಕೂಡಿಗೆ, ಸತೀಶ್ ಆಚಾರ್ಯ, ಸ್ನೇಕ್ ಪ್ರಕಾಶ್, ನಾಗೇಶ್, ಸಂತೋಷ ಇವರಿಗೆ ಸನ್ಮಾನ ನೆರವೇರಿಸಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಉದ್ಯಮಿ ಆರ್.ವಿ.ಹೆಬ್ಬಳ್ಳಿ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಡೊನಾಲ್ಡ್ ಡಿಸೋಜಾ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬೆಳ್ತಂಗಡಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್, ಗುರುವಾಯನಕೆರೆ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ, ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಶಾರದಾ ರೈ, ವೆಂಕಟ್ರಾಯ ಅಡುರು, ಪಿ.ಕೆ.ರಾಜು ಪೂಜಾರಿ, ಕಿಶೋರ್ ಹೆಗ್ಡೆ, ತಿಮ್ಮಪ್ಪ ಗೌಡ ಬೆಳಾಲು, ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾಯಿಸ್,ಜನಜಾಗೃತಿ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಯೋಜನಾಧಿಕಾರಿಗಳಾದ ಸುರೇಂದ್ರ ಬೆಳ್ತಂಗಡಿ, ದಯಾನಂದ ಪೂಜಾರಿ ಗುರುವಾನಕೆರೆ, ಮಾಧವ ಗೌಡ ಬಂಟ್ವಾಳ, ನವಜೀವನ ಸಮಿತಿ ಸದಸ್ಯರು, ಯೋಜನೆಯ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.