ಬೆಳಾಲು: ನಾಗಾಂಬಿಕ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

0

ಬೆಳಾಲು: ಸೆ.28ರಂದು ನಾಗಾಂಬಿಕ ಸಂಜೀವಿನಿ ಮಹಿಳಾ ಒಕ್ಕೂಟ ಬೆಳಾಲು ಇದರ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಸಲಾಯಿತು.ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.

ಒಕ್ಕೂಟದ ಅಧ್ಯಕ್ಷರು ಹಾಗೂ ಅತಿಥಿಗಳು ದೀಪ ಬೆಳಗಿಸಿದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ ಇವರು ಸಂಜೀವಿನಿಯ ಧ್ಯೇಯೋದ್ದೇಶಗಳು, ಎನ್.ಆರ್.ಎಲ್.ಎಂ ಯೋಜನೆಯಿಂದ ಸಿಗುವ ಸೌಲಭ್ಯಗಳು, ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಮುಂದೆ ಒಕ್ಕೂಟದ ಐದು ವರ್ಷದ ವರದಿ, ಒಕ್ಕೂಟದ ಖರ್ಚು ವೆಚ್ಚದ ವಿವರ, ಸಿ.ಎ ಆಡಿಟ್ ನ ವರದಿಯನ್ನು ಮುಖ್ಯ ಪುಸ್ತಕ ಬರಹಗಾರರಾದ ಹರಿಣಾಕ್ಷಿ ಇವರು ಮಂಡಿಸಿದರು.ಹಾಗೂ ಅದಕ್ಕೆ ಮಹಾಸಭೆಯ ಅನುಮೋದನೆಯನ್ನು ಪಡೆಯಲಾಯಿತು.ಮುಂದೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಹಾಲಿ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮಾಡಲಾಯಿತು.ತಾಲೂಕು ಮಟ್ಟದ ಅಧ್ಯಕ್ಷರು ಆಗಿರುವ ಒಕ್ಕೂಟದ ಅಧ್ಯಕ್ಷರು ಆಗಿರುವ ಮಧುರ ಇವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಎಂಬಿಕೆ ಎಲ್.ಸಿ.ಆರ್.ಪಿ ಗಳನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

ವಲಯ ಮೇಲ್ವಿಚಾರಕರಾದ ಜಯಾನಂದ್ ಇವರು ಗ್ರಾಮ ಪಂಚಾಯತ್ ಒಕ್ಕೂಟಕ್ಕೆ ಇರುವ ಅಧಿಕಾರದ ಬಗ್ಗೆ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.ತಾಲೂಕು ವ್ಯವಸ್ಥಾಪಕರಾಗಿರುವ ನಿತೀಶ್ ಇವರು ಸಂಜೀವಿನಿ ಯೋಜನೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಹಾಲಿ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾಸಭೆಗೆ ಧನಸಹಾಯ ನೀಡಿ ಸಹಕರಿಸಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಹಳ್ಳಿ ಸಂತೆಯನ್ನು ಕೂಡ ನಡೆಸಿದ್ದು ಸಂಘದ ಸದಸ್ಯರು ತಯಾರಿಸಿದ್ದ ವಿವಿಧ ರೀತಿಯ ಉತ್ಪನ್ನಗಳನ್ನು, ತರಕಾರಿಗಳನ್ನು, ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು.ಮುಂದೆ ಘನತ್ಯಾಜ್ಯ ಘಟಕದ ತ್ಯಾಜ್ಯ ವಿಲೇವಾರಿಯ ಬಗ್ಗೆ ನಿತಿನ್ ಇವರು ಸೂಕ್ತವಾದ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಎಂಬಿಕೆ, ಎಲ್.ಸಿ.ಆರ್.ಪಿ ಗಳು ಕೃಷಿ ಉದ್ಯೋಗ ಸಖಿ, ಪಶುಸಖಿ, ಬಿಸಿ ಸಖಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.ಶಾಲಿನಿ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಕೃಷಿ ಉದ್ಯೋಗ ಸಖಿ ಲತಾ ಇವರು ಸ್ವಾಗತಿಸಿದರು.ಎಲ್.ಸಿ.ಆರ್.ಪಿ ವಸಂತಿ ಇವರು ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here