ಶಿಬಾಜೆ: ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಸೆ.25ರಂದು ಸಂಘದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರವರು ಮಾತನಾಡಿ 4%ಡಿವಿಡೆಂಟ್ ಮತ್ತು ಹಾಲು ಉತ್ಪಾದಕರಿಗೆ ನೀಡುವುದಾಗಿ ತಿಳಿಸಿದರು.ವಿಸ್ತರಣಾಧಿಕಾರಿ ರಾಜೇಶ್ ರವರು ಮಾತನಾಡಿ ಹಾಲಿನ ಗುಣಮಟ್ಟ ಕಾಪಾಡಿಕೊಂಡು ಬರುವುದರ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.ಹಾಲು ಒಕ್ಕೂಟದ ಡಾ. ಜಿತೇಂದ್ರರವರು ಮಾತನಾಡಿ ಹೆಣ್ಣು ಕರು ಜನಿಸಲೆಂದೆ ನೀಡುವ ಚುಚ್ಚು ಮದ್ದಿನ ಕುರಿತು ಚರ್ಮ ಗಂಟು ರೋಗದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಉಪಾಧ್ಯಕ್ಷ ಜಗದೀಶ್ ಬಿ, ನಿರ್ದೇಶಕರುಗಳಾದ ಓ.ಐ ಜೋಯ್, ಕೆ.ಪಿ ಜೋರ್ಜ್, ಓ ಐ ಮ್ಯಾತ್ಯು, ಟಿ ಎ ವರ್ಗಿಸ್, ವಿ ಎಂ ಬಾಬು, ಕುಞ, ಮರಿಯಮ್ಮ, ಶಾಂತ, ರಿತಾಮ್ಮ, ಮತ್ತು ಉಪಸ್ಥಿತರಿದ್ದರು.
ಸ್ವಾಗತವನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೆಲಿನಾ ಬಿ.ವಿ, ಧನ್ಯವಾದವನ್ನು ಸಿಬಿ ಪಿ.ವಿ ನೆರವೇರಿಸಿದರು.