ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ 36ನೇ ವರ್ಷದ ಶ್ರೀ ಗಣೇಶೋತ್ಸವವು ಬಳಂಜ ಶ್ರೀ ಶಾರದಾ ಕಲಾ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಕೇಶ್ ಹೆಗ್ಡೆಯವರು ವಹಿಸಿ ಶುಭಕೋರಿದರು.
ಧಾರ್ಮಿಕ ಉಪನ್ಯಾಸವನ್ನು ಪ್ರದಿದ್ದ ವಾಗ್ಮೀ ಡಾ.ಪ್ರದೀಪ್ ನಾವೂರು ಮಾಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಟೀಚರ್ಸ್ ಕೋ.ಅಪರೇಟಿವ್ ಸೊಸೈಟಿಯ ಶಾಖಾಧಿಕಾರಿ ರವೀಂದ್ರ ಶೆಟ್ಟಿ ಬಳಂಜ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ,ನಂದಗೋಕುಲ ಗೋಶಾಲೆಯ ಪ್ರವರ್ತಕರಾದ ಡಾ.ಎಂ.ಎಂ.ದಯಾಕರ್ ಉಜಿರೆ,ಬೆಳ್ತಂಗಡಿ ನ್ಯಾಯವಾದಿ ಮುರಳಿ ಬಲಿಪ, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಹರೀಶ್ ಕೆ.ಪೂಜಾರಿ ಮಂಗಳೂರು,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪಿ.ಕೋಟ್ಯಾನ್, ಎಸ್.ಕೆ.ಡಿ.ರ್.ಡಿ.ಪಿ ಗುರುವಾಯನಕೆರೆ ಮೇಲ್ವಿಚಾರಕ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಕೋಶಾಧಿಕಾರಿ ಗಣೇಶ್ ಸಂಭ್ರಮ ಹಾಗೂ ಮಾಜಿ ಅಧ್ಯಕ್ಷರುಗಳು, ಊರವರು ಸಹಕರಿಸಿದರು.
ರತ್ನಾಕರ ಶೆಟ್ಟಿ ಪ್ರಾರ್ಥಿಸಿದರು. ಗಣೇಶೋತ್ಸವ ಸಮಿತಿ ರಾಕೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ದೇವಾಡಿಗ ಧನ್ಯವಾದ ಸಲ್ಲಿಸಿದರು.
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ಪಂಚಲಿಂಗೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ,ಶಾಲಾ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು. ಸಂಜೆ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ,ಕೇರಳ ಚೆಂಡೆ ಹಾಗೂ ಕಾಪಿನಡ್ಕ ಫಲ್ಗುಣಿ ನದಿಯಲ್ಲಿ ಪೂರ್ತಿ ವಿಸರ್ಜನೆ ನಡೆಯಲಿದೆ.ಸಮಿತಿ ಸದಸ್ಯರು ಸಹಕರಿಸಿದರು.