ಚಂದ್ರಯಾನ-3 ಯಶಸ್ಸು ಹಿನ್ನಲೆ-ಸುರ್ಯ ಸದಾಶಿವೇಶ್ವರ ದೇವಸ್ಥಾನಕ್ಕೆ ಮಣ್ಣಿನ ರಾಕೆಟ್ ಹರಕೆ ಸಂದಾಯ

0

ಸುರ್ಯ: ಇಸ್ರೋ ಚಂದ್ರಯಾನ-3 ಯಶಸ್ಸಾಗಬೇಕೆಂದು ಕಟ್ಟಿಕೊಂಡಿದ್ದ ಹರಕೆ ಹಿನ್ನಲೆ ಸುರ್ಯ ಸದಾಶಿವ ರುದ್ರ ದೇವಸ್ಥಾನದಲ್ಲಿ ಮಣ್ಣಿನ ರಾಕೆಟ್ ಪ್ರತಿಕೃತಿಯನ್ನು ಸಂದಾಯ ಮಾಡಲಾಗಿದೆ.

ಉಜಿರೆ ನಿನ್ನಿಕಲ್ಲು ಚಿರಾಗ್ ಚಿಕನ್ ಸೆಂಟರ್ ನ ಶಶಿ, ಸಂದೇಶ್ ಕಲ್ಮಂಜರವರು ಇತಿಹಾಸ ಪ್ರಸಿದ್ಧ ಮಣ್ಣಿನ ಹರಕೆಯ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಚಂದ್ರಯಾನ-3 ಹೋಲುವ ಮಣ್ಣಿನ ರಾಕೆಟ್ ನ ವಿಗ್ರಹವನ್ನು ಹರಕೆಯ ರೂಪದಲ್ಲಿ ದೇವರಿಗೆ ಸಲ್ಲಿಸಿದ್ದಾರೆ.

ಕಳೆದ ಆಗಸ್ಟ್ 23ರಂದು ಇಸ್ರೋ ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಇಳಿಸುವ ಮೂಲಕ ಚಂದ್ರನ ದಕ್ಷಿಣ ಭಾಗದಲ್ಲಿ ಮೊದಲು ಲಗ್ಗೆ ಇಟ್ಟ ಸಾಧನೆಗೆ ಭಾರತ ಪಾತ್ರವಾಗಿತ್ತು.

ಈ ಹಿನ್ನೆಲೆ ಇದರ ಪ್ರಯೋಗ ಯಶಸ್ವಿಯಾದರೆ ಮಣ್ಣಿನ ಮೂರ್ತಿ ಯನ್ನು ಕೊಡುವುದಾಗಿ ಹರಕೆ ಹೊತ್ತಿದ್ದರು.

p>

LEAVE A REPLY

Please enter your comment!
Please enter your name here