ನ್ಯಾಯತರ್ಪು : ನಾಳ ಶತಮಾನದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕನ್ಯಾ ಸಂಕ್ರಮಣ ಪ್ರಯುಕ್ತ ದೇವರಿಗೆ- ಕ್ಷೇತ್ರ ದೈವಗಳಿಗೆ ವಿಶೇಷ ಪೂಜೆ, ಕೊಪ್ಪರಿಗೆ ಇಳಿಸುವುದು, ಕದಿರು ವಿತರಣೆ ಹಾಗೂ ಸಾರ್ವಜನಿಕ ಹೊಸ ಅಕ್ಕಿ ಊಟ ಸೆ.17 ರಂದು ಜರುಗಿತು.
ಶ್ರೀ ದುರ್ಗಾಪರಮೇಶ್ವರಿ ಮಂಗಳವಾದ್ಯದೊಂದಿಗೆ ಕದಿರನ್ನು ಶ್ರೀ ಕ್ಷೇತ್ರ ಕ್ಕೆ ತಂದು ಪೂಜೆ ಸಲ್ಲಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಲಾಯಿತು.ಮಧ್ಯಾಹ್ನ ಸಾರ್ವಜನಿಕ ಹೊಸ ಅಕ್ಕಿ (ನವಾನ್ನ ಭೋಜನ ) ಊಟ ಅನ್ನಸಂತರ್ಪಣೆ ಯೊಂದಿಗೆ ಕೊಪ್ಪರಿಗೆ ಇಳಿಸುವ ಕಾರ್ಯಕ್ರಮ ನಡೆಯಿತು.ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಪೂಜಾ- ವಿಧಿ- ವಿಧಾನ ಗಳೊಂದಿಗೆ ನಡೆಯಿತು.
ವ್ಯವಸ್ಥಾನ ಸಮಿತಿ ಅಧ್ಯಕ್ಷರಾದ ಭುವನೇಶ್ ಜಿ, ಸದಸ್ಯರಾದ ಸಿ.ಎ.ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾನ ಸಮಿತಿ ಸದಸ್ಯ ವಸಂತ ಮಜಲು,ಜನಾರ್ಧನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು, ಆಂಬಾ ಬಿ ಆಳ್ವ ನಾಳ, ವಿಜಯ ಹೆಚ್. ಪ್ರಸಾದ್ ಕುಂಠಿನಿ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷರು ಯಾದವ ಗೌಡ ಮುದ್ದುಂಜ, ಪ್ರ.ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ ನಾಳ, ದೇವಳ ಕಚೇರ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ, ಸ್ಥಳೀಯರಾದ ಪೂವಪ್ಪ ಶೆಟ್ಟಿ ಬಿಳಿಬೈಲು, ಕೂಸಪ್ಪ ಗೌಡ ಹೀರ್ಯ, ಸದಾಶಿವ ನಾಯ್ಕ ಹೀರ್ಯ, ಉಮನಾಥ ಶೆಟ್ಟಿ ಕುಲ್ಲುಂಜ, ಜಗನ್ನಾಥ ಪೂಜಾರಿ ವಂಜಾರೆ, ಸೋಮಪ್ಪ ಗೌಡ ಕುಬಾಯ ಮತ್ತು ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಭಾಗವಹಿಸಿದ್ದರು.