ಉಜಿರೆ: ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ-ನಮ್ಮ ಇಂದಿನ ತರಬೇತಿ ಮತ್ತು ನಿರ್ಧಾರ ನಮ್ಮ ಭವಿಷ್ಯವನ್ನು ರೂಪಿಸುತ್ತದೆ- ಉಷಾ ಕಿರಣ ಕಾರಂತ್

0

ಉಜಿರೆ: “ನಾವು ಇವಾಗ ತೆಗೆದುಕೊಳ್ಳುವ ತರಬೇತಿ ನಮ್ಮ ಜೀವನದ ಉದ್ದಕ್ಕೂ ನಮ್ಮ ನಡವಳಿಕೆಯಲ್ಲಿ ಕಾಣುತ್ತದೆ. ನನ್ನ ವಿಧ್ಯಾರ್ಥಿ ಜೀವನದ ಶಿಕ್ಷಣವು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನೀವೂ ಸಹ ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು” ಎಂದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಕಿರಣ ಕಾರಂತ್ ರವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವಾರ್ಷಿಕ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಇಡೀ ಭಾರತದಲ್ಲಿ ಯಾವುದಾರೊಂದು ಕಾಲೇಜಿಗೆ ಎನ್.ಎಸ್.ಎಸ್ ನಲ್ಲಿ ಹೆಚ್ಚಿನ ಪ್ರಶಸ್ತಿಗಳು ಬಂದಿದ್ದರೆ ಅದು ನಮ್ಮ ಕಾಲೇಜಿ ಗೆ ಮಾತ್ರ. 18 ರಾಜ್ಯ ಮತ್ತು 3 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯ.

ಉತ್ತಮ ಸ್ವಯಂ ಸೇವಕರನ್ನು ಹೊಂದಿರುವುದೇ ಅದೃಷ್ಟ. ಕೇವಲ ವೇದಿಕೆಯಲ್ಲಿ ಕಾರ್ಯಕ್ರಮ ಮಾಡುವುದು ಮಾತ್ರವಲ್ಲದೆ ಪ್ರತಿನಿತ್ಯ ಒಬ್ಬರಿಗಾದರರೂ ನಮ್ಮಿಂದಾಗುವ ಸಹಾಯ ಮಾಡಬೇಕು. ಆವಾಗ ಸೆರಿದ್ಧಕ್ಕೂ ಸಾರ್ಥಕವಾಗುವುದು” ಎಂದು ‘ಇಂದಿರಾಗಾಂದಿ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ’ ಪುರಸ್ಕೃತ ಯೋಜನಾಧಿಕಾರಿ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ” ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುವುದೇ ಸೇವೆ.

ಇಷ್ಟ ಪಟ್ಟು ಸೇರಬೇಕು ಏಕೆಂದರೆ ಇಷ್ಟ ಪಟ್ಟು ಮಾಡುವ ಕಾರ್ಯ ಸಾರ್ಥಕ ಭಾವವನ್ನು ತರುತ್ತದೆ. ನಿಮ್ಮನ್ನೆಲ್ಲ ನೋಡುವಾಗ ನಾನು ಸ್ವಯಂ ಸೇವಕನಾಗಿದ್ದ ಕ್ಷಣ , ಯೋಜನಾಧಿಕಾರಿಯಾಗಿದ್ದ ದಿನಗಳೆಲ್ಲ ನೆನಪಾಗುತ್ತಿದೆ.” ಎಂದು ನೆನಪುಗಳನ್ನು ಹಂಚಿಕೊಂಡರು.ಅಧ್ಯಕ್ಷರ ಮುಖಾಂತರ ಎನ್.ಎಸ್. ಎಸ್. ಪ್ರತಿಜ್ಞಾ ಸ್ವೀಕಾರ ಮಾಡಲಾಯಿತು. ಸ್ವಯಂ ಸೇವಕರು ತಯಾರಿಸಿದ ಭಿತ್ತಿಚಿತ್ರ ಬಿಡುಗಡೆ ಬಳಿಕ ಹಿರಿಯ ಸ್ವಯಂ ಸೇವಕರು ಕಿರಿಯ ಸ್ವಯಂ ಸೇವಕರಿಗೆ ಅಧಿಕಾರ ಹಸ್ತಾಂತರಿಸಿದರು. ರಾಷ್ಟ್ರೀಯ ಗಣರಾಜ್ಯ ಪಥಸಂಚಲನದಲ್ಲಿ ಭಾಗವಹಿಸಿದ್ದ ಧನುಷ್ ಕೆ.ಪಿ. (2017-18) ಹಾಗೂ ಸತ್ಯಪ್ರಸಾದ್ ಪಿ. (2019-20) ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರಿಗೆ ಯೋಜನಾಧಕಾರಿಗಳಾದಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ರವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾರತದ ಸಂವಿಧಾನದ ಪ್ರ‌ಸ್ಥಾವನೆ ಹಾಗೂ ಪೀಠಿಕೆಯನ್ನು ಪ್ರಮಾಣ ವಚನವಾಗಿ ಬೋಧಿಸಿದರು.ಎನ್.ಎಸ್.ಎಸ್ ಯೋಜನಾಧಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಸ್ವಾಗತಿಸಿದರು, ಪ್ರೊ.ದೀಪಾ ಆರ್. ಪಿ ಉಪಸ್ಥಿತರಿದ್ದರು. ಸ್ವಯಂಸೇವಕಿ ಚಂದ್ರಿಕಾ ಧನ್ಯವಾದ ತಿಳಿಸಿದರು. ವಿನುತ ಹಾಗೂ ಸುದೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here