ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ, ಬಾಲಕೃಷ್ಣ, ರಾಧೆ ವೇಷ ಸ್ಪರ್ಧೆ ಮತ್ತು ಮೊಸರು ಕುಡಿಕೆ ಸ್ಪರ್ಧೆ ಯನ್ನು ಕ್ಷೇತ್ರ ದ ಅಮೃತವರ್ಷಿಣಿ ಸಭಾಂಗಣ ದಲ್ಲಿ ನಡೆಸಲಾಯಿತು.
ಸುಮಾರು 55 ವಿದ್ಯಾರ್ಥಿಗಳು ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸಿದರು.
ನಂತರ 5,6,7ನೇ ತರಗತಿ ಮಕ್ಕಳಿಗೆ ಮೊಸರು ಕುಡಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿಯಿತು. ಇದರಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ತುಂಬಾ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮುದ್ದು ಕೃಷ್ಣ, ಬಾಲಕೃಷ್ಣ ಮತ್ತು ರಾಧಾ ವೇಷಧಾರಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು.ಈ ಬಹುಮಾನವನ್ನು ಸ್ಥಳೀಯ ಉದ್ಯಮಿಯಾದ ಗಿರೀಶ್ ಕುದ್ರೆoತಾಯರು ನೀಡಿ ಸಹಕರಿಸಿದರು.ಇವರನ್ನು ಶಾಲಾ ಮುಖ್ಯ ಗುರುಗಳಾದ ಪಿ.ಸುಬ್ರಹ್ಮಣ್ಯ ರಾವ್ ಇವರು ಅಭಿನಂದಿಸಿದರು.
ಕಾರ್ಯಕ್ರಮದ ತೀರ್ಪುಗಾರರಾಗಿ ನಿವೃತ್ತ ಶಿಕ್ಷಕಿ ಮನೋರಮ, ಗಿರಿಜಾ ಹಾಗೂ ಸತ್ಯವತಿ ಸಹಕರಿಸಿದರು.
ಈ ಕಾರ್ಯಕ್ರಮ ವನ್ನು ಶಿಕ್ಷಕಿಯರಾದ ಉಷಾ ಮತ್ತು ಪೂರ್ಣಿಮಾ ಸಂಯೋಜಿಸಿದರು.ಶಿಕ್ಷಕರೆಲ್ಲರೂ ಸಹಕರಿಸಿದರು.