ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಗುರುವಂದನಾ ಕಾರ್ಯಕ್ರಮ

0

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸೆ.10ರಂದು ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.

ಶಿಕ್ಷಕರಲ್ಲಿನ ಗುಣವಂತಿಕೆಯೇ ಒಂದು ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಬಹು ಮುಖ್ಯ ಘಟಕ ಎಂದು ಕರ್ನಾಟಕ ಕ್ಯಾಥೋಲಿಕ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಸೊಸೈಟಿ ಯ ಕಾರ್ಯದರ್ಶಿ ವಂದನಿಯ ಫಾ. ಶಾಜಿ ಮಾತ್ಯು ತಿಳಿಸಿದರು.

ನೆಲ್ಯಾಡಿ ಅಲ್ಫೋನ್ಸ ಚರ್ಚ್ ನ ಸದಸ್ಯರಾಗಿದ್ದು ವಿವಿದ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ವೃತ್ತಿಯಲ್ಲಿತೊಡಗಿಸಿಕೊಂಡಿರುವ ಸುಮಾರು ಇಪ್ಪತ್ತು ಶಿಕ್ಷರನ್ನುಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ನ ಟ್ರಸ್ಟಿಗಳಾದ ಶ್ರೀ ಜೋಬಿನ್ ಪರಪರಾಗತ್,ಶ್ರೀ ಬಿಜು ಪೆರು೦ಪಲ್ಲಿ ಸಂಡೇ ಸ್ಕೂಲ್ ನ ಮುಖ್ಯ್ಯೋಪಾಧ್ಯಯರಾದ ರೊಯ್ ಕೊಳಂಗರಾತ್ತ್ ಹಾಗೂ ರಕ್ಷಕ ಶಿಕ್ಷಕ ಸಂಘದಶ್ರೀ ಪ್ರಕಾಶ್ ಕೆ ಜೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here