




ಮರೋಡಿ: ಮರೋಡಿ ಮಂಡಲ ಪಂಚಾಯಿತಿ ಮಾಜಿ ಸದಸ್ಯ, ಶಿರ್ತಾಡಿ ಸಮೀಪದ ಮಕ್ಕಿಯ ಶೆಟ್ಟಿಬೆಟ್ಟು ನಿವಾಸಿ ಗಂಗಯ್ಯ ಪೂಜಾರಿ (72) ಅವರು ಅನಾರೋಗ್ಯದಿಂದ ಸೆ.9 ರಂದು ನಿಧನರಾದರು.


ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದ ಅವರು ಪ್ರಗತಿಪರ ಕೃಷಿಕರಾಗಿದ್ದರು.
ಮೃತರು ಪತ್ನಿ ಸಿರಿಯಮ್ಮ, ಪುತ್ರ ಸತೀಶ್ ಕೋಟ್ಯಾನ್, ಪುತ್ರಿಯರಾದ ಸುಗಂಧಿ ವಸಂತ್, ಸುಜಾತಾ ಶ್ರೀನಿವಾಸ್, ಸುಮಲತಾ ಗಿರೀಶ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.









