ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಲ್ಯಾಬೋರೆಟರಿಗೆ ಬಯೋಕೆಮಿಸ್ಟ್ರೀ ಅನಲೈಸರ್ ಮೆಷಿನ್ ಅಳವಡಿಕೆ

0

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಆಸ್ಪತ್ರೆಯಲ್ಲಿ ಲ್ಯಾಬೋರೆಟರಿಗೆ ವಿನೂತನ ಮಾದರಿಯ ಯುರೋಲ್ಯಾಬ್ 200 (ಸಂಪೂರ್ಣ ಸ್ವಯಂಚಾಲಿತ ಬಯೋಕೆಮಿಸ್ಟ್ರಿ ವಿಶ್ಲೇಷಕ) ಬಯೋಕೆಮಿಸ್ಟ್ರೀ ಅನಲೈಸರ್ ಮೆಷಿನ್ ಅಳವಡಿಸಲಾಯಿತು.

ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವಂದನಾ ಎಂ ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ.ಸ್ವರೂಪ್, ಲ್ಯಾಬ್ ಇನ್ಚಾರ್ಜ್ ಪ್ರಕೃತಿ, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

ವೈದ್ಯಕೀಯ ಕ್ಷೇತ್ರದ ಸವಾಲುಗಳ ನಡುವೆ ಗ್ರಾಮೀಣ ಪ್ರದೇಶದಲ್ಲಿ ಉತ್ಕೃಷ್ಟ ಸೇವೆ ಒದಗಿಸುತ್ತಿರುವ ಶ್ರೀ ಕೃಷ್ಣ ಆಸ್ಪತ್ರೆಯ ಲ್ಯಾಬೊರೆಟರಿಗೆ ಈ ಮೆಷಿನ್ ಅಳವಡಿಸಲಾಗಿದೆ.ಒಂದೇ ಬಾರಿಗೆ 38 ರಕ್ತ ಪರೀಕ್ಷೆಯನ್ನು ಮಾಡಬಹುದಾಗಿದೆ.

p>

LEAVE A REPLY

Please enter your comment!
Please enter your name here