ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಸೆಪ್ಟೆಂಬರ್ 7 ರಂದು ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಜೊತೆಗೂಡಿ ವಿನೂತನವಾಗಿ ಆಚರಿಸಲಾಯಿತು.

ಪುಟಾಣಿಗಳು ನೃತ್ಯದ ಮೂಲಕ ಪ್ರಾರ್ಥಿಸಿ, ಸ್ವಾಗತಿಸಿದರು.ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು.

ಶಿಕ್ಷಕರು ಶಿಸ್ತು, ತಾಳ್ಮೆ ಹಾಗೂ ಸಮರ್ಪಣಾ ಭಾವದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಮುಗ್ಧ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿಯೊಂದಿಗೆ ಉತ್ತಮ ಭವಿಷ್ಯವನ್ನು ನೀಡುವ ಮಹತ್ತರವಾದ ಪಾತ್ರ ಶಿಕ್ಷಕರದ್ದಾಗಿದೆ ಎಂದು ಶಾಲಾ ಸಂಚಾಲಕರಾದ ಅತಿ ವಂದನೀಯ ಫಾ.ವಾಲ್ಟರ್ ಡಿಮೆಲ್ಲೋರವರು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ ಕ್ಲಿಫರ್ಡ್ ಪಿಂಟೋರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ಸಹಕರಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಕ್ಷಕ ಸಂಘದ ಸದಸ್ಯರನ್ನು ಅಭಿನಂದಿಸಿದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಶಿಕ್ಷಕರಕ್ಷಕ ಸಂಘ ಮತ್ತು ಸಂಸ್ಥೆಯ ವತಿಯಿಂದ ಶಿಕ್ಷಕರಿಗೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.10ನೇ ತರಗತಿಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ಗಳಿಸಲು ಸಹಕರಿಸಿದ ಶಿಕ್ಷಕರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿಗಳಾದ ಸೃಷ್ಟಿ ಮತ್ತು ಮೆಲ್ಸ್ಟನ್ ಶಿಕ್ಷಕರ ದಿನದ ಕುರಿತು ಮಾತನಾಡಿದರು.

ಶಿಕ್ಷಕ ರಕ್ಷಕ ಸಂಘದ ಸದಸ್ಯರು ಶುಭಾಶಯ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳು ಹಾಡು ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಾಲ್ಟರ್ ಮೋನಿಸ್ ಹಾಗೂ ಕಾರ್ಯದರ್ಶಿ ಗಿಲ್ಬರ್ಟ್ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರಿಯಾ ಡಿಸೋಜ ಉಪಸಿತರಿದ್ದರು.

ವಿದ್ಯಾರ್ಥಿನಿಯರಾದ ನಾಫಿಯ ಹಾಗೂ ಸನ ಕಾರ್ಯಕ್ರಮವನ್ನು ನಿರ್ವಹಿಸಿದರು.ಹರಿಪ್ರಿಯಾ ವಂದಿಸಿದರು.ಸಹಶಿಕ್ಷಕಿಯರಾದ ಶ್ರೀಮತಿ ಬ್ಲೆಂಡಿನ್ ರೋಡ್ರಿಗಸ್, ಅನಿತಾ ಹಾಗೂ ಕು.ವಿನಿತಾ ಮೋರಸ್ ಸಹಕರಿಸಿದರು.

LEAVE A REPLY

Please enter your comment!
Please enter your name here