ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ

0

ಪುಂಜಾಲಕಟ್ಟೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಆ.28ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಶಾಲೆಯಲ್ಲಿ ನಡೆಯಿತು.ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣ ಮಾಡಲು ಒಂದು ವೇದಿಕೆ ನಿರ್ಮಾಣವಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಮುಂಡಾಜೆ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ಆಗಮಿಸಿದ್ದರು.ಹೇಗೆ ದೀಪ ಮೇಲ್ಮುಖವಾಗಿ ಉರಿಯುವುದೋ ಹಾಗೆ ಜ್ಞಾನದ ಚಲನೆ ಕೂಡ ಯಾವಾಗಲೂ ಮೇಲ್ಮುಖವಾಗಿರುತ್ತದೆ.ಈ ನಿಟ್ಟಿನಲ್ಲಿ ಮಕ್ಕಳ ಜ್ಞಾನ, ಪ್ರತಿಭೆ ಸದಾ ಮೇಲ್ಮುಖವಾಗಿರಬೇಕು ಸೋಲು ಗೆಲುವಿನ ಬಗ್ಗೆ ಯೋಚಿಸದೆ ಮುನ್ನಡೆಯಬೇಕೆಂದು ಮಕ್ಕಳಿಗೆ ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು.

ಮುಖ್ಯ ಅಥಿತಿಯಾಗಿ ಶ್ರೀಧರ ರಾವ್ ಪೇಜಾವರ ಪ್ರಧಾನ ಅರ್ಚಕರು ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಮಡಂತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷರು ಭಾಗವಹಿಸಿದ್ದರು.
ಶಿಕ್ಷಣ ಸಂಯೋಜಕರು ಹಾಗೂ ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ಚೇತನಾಕ್ಷಿ ಮಾತನಾಡಿ, ವಲಯ ಮಟ್ಟದಲ್ಲಿ ಆಗುತ್ತಿರುವ ಈ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾದ ತಯಾರಿ ಮಾಡಿರುವ ಬಗ್ಗೆ ಮೊರಾರ್ಜಿ ದೇಸಾಯಿ ಮಚ್ಚಿನ ಶಾಲೆಗೆ ವಿಶೇಷ ಅಭಿಮಾನ ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರುಕ್ಮಿಣಿಯವರು ವಹಿಸಿದ್ದರು.

ಮುಖ್ಯ ಅತಿಥಿ ಎಡ್ವರ್ಡ್ ಡಿಸೋಜ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಪ್ರಸ್ತುತ ಕಟ್ಟದಬೈಲು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕೊಯ್ಯೂರು ಪ್ರೌಢ ಶಾಲೆಯ ಶಿಕ್ಷಕರಾದ ರಾಮಚಂದ್ರ ದೊಡ್ಡಮನಿ ಇವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಪುಂಜಾಲಕಟ್ಟೆ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಚೇತನಾರವರು ಈ ಕಾರ್ಯಕ್ರಮದ ಸಂಘಟಕರಾಗಿ ಕಾರ್ಯ ನಿರ್ವಹಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ಮತ್ತು ಸಂಘದ ಉಪಾಧ್ಯಕ್ಷರು ಕಿರಣ್ ಕುಮಾರ್, ತಾಲೂಕು ಕಾರ್ಯದರ್ಶಿ ದಿನೇಶ್ ಪುತ್ತಿಲ, ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲರು ಖಾಲಿದ್ ಕ್ರಮವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಸುಪ್ರೀತಾ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.ಇತರ ಶಿಕ್ಷಕರು ಮತ್ತು ಸಿಬ್ಬಂದಿಗಳು ಸಹಕರಿಸಿದರು.

ಸಮಗ್ರ ಪ್ರಶಸ್ತಿಯನ್ನು ಕಿರಿಯ ವಿಭಾಗದಲ್ಲಿ ಕೆ.ಪಿ.ಎಸ್ ಪುಂಜಾಲಕಟ್ಟೆ ಮತ್ತು ಹಿರಿಯ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಡೆದುಕೊಂಡಿತು.

p>

LEAVE A REPLY

Please enter your comment!
Please enter your name here