ಕಕ್ಕಿಂಜೆ: ಆ.30ರಂದು ಮದ್ಯರಾತ್ರಿ ತೀವ್ರ ಜ್ವರ ಹಾಗೂ ಅನಾರೋಗ್ಯದಿಂದ ಬಳಲುತಿದ್ದ 9 ತಿಂಗಳ ಮಗುವನ್ನು ಪೋಷಕರು ಕಕ್ಕಿಂಜೆ ಕೃಷ್ಣ ಹಾಸ್ಪಿಟಲ್ ಇದರ ಸಹ ಸಂಸ್ಥೆ ಸಾಯಿಕೃಷ್ಣ ಆಸ್ಪತ್ರೆ ಬಣಕಲ್ ಗೆ ಕರೆತಂದಿದ್ದರು.ಕೂಡಲೇ ಮಗುವನ್ನು ಪರಿಶೀಲಿಸಿದ ವೈದ್ಯರು , ಮಗು ಮೆದುಳು ಜ್ವರ ಹಾಗು ತೀವ್ರ ಅಪಸ್ಮಾರಕ್ಕೆ ಒಳಗಾಗಿರುವು ಕಂಡು ಬಂದು, ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳೀಕೃಷ್ಣ ಇರ್ವಾತ್ರಾಯ ಅವರ ನಿರ್ದೇಶನದಂತೆ ಮಂಗಳೂರಿನ ಖ್ಯಾತ ವೈದ್ಯರಾದ ಡಾ.ಜಯಪ್ರಕಾಶ್( ಸ್ಪೆಷಲಿಸ್ಟ್ ಫಿಸಿಷಿಯನ್ -ಶ್ರೀನಿವಾಸ ಮೆಡಿಕಲ್ ಕಾಲೇಜು) ಅವರನ್ನು ಸಂಪರ್ಕಿಸಿ ಮಗುವನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ಸಲಹೆ ನೀಡಿದರು.ಮಗುವನ್ನು ಕೂಡಲೇ ಆಸ್ಪತ್ರೆಯ ಆಂಬ್ಯುಲೆನ್ಸ್ ಮುಖಾಂತರ ಕರೆದೊಯ್ಯುವ ವ್ಯವಸ್ಥೆ ಮಾಡುತಿದ್ದಂತೆ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಮಧನ್ ( MBBS ) ಸ್ವಯಂಪ್ರೇರಿತರಾಗಿ, ಮಗುವಿಗೆ 120ಕಿಲೋ ದೂರದ ಪ್ರಯಾಣದ ಸಂದರ್ಭದಲ್ಲಿ ತುರ್ತುಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು ಮಗುವಿನ ಜೊತೆ ಮಂಗಳೂರಿಗೆ ಪ್ರಯಾಣಿಸಲು ನಿರ್ಧರಿಸಿ ದಾರಿಯುದ್ದಕ್ಕೂ ಮಗುವಿನ ನಿಗಾ ವಹಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಅಜಿತ್ ಹಾಗೂ ಮ್ಯಾನೇಜರ್ ಅನಂತ ಪ್ರಸಾದ್ ಹಾಗು ಸಿಬ್ಬಂದಿ ಸಹಕರಿಸಿದರು.
ಕೃಷ್ಣ ಹಾಸ್ಪಿಟಲ್ ಕಕ್ಕಿಂಜೆ ಇದರ ಸಹ ಸಂಸ್ಥೆ ಸಾಯಿ ಕೃಷ್ಣ ಹಾಸ್ಪಿಟಲ್ ಬಣಕಲ್ ಸೇವೆಗೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.