ತಾಲೂಕು ರಬ್ಬರು ಬೆಳೆಗಾರರ ಸಹಕಾರ ಸಂಘ ರೂ.17.98 ಲಕ್ಷ ನಿವ್ವಳ ಲಾಭ- ಶ್ರೀಧರ ಜಿ.ಭಿಡೆ- ಪತ್ರಿಕಾ ಗೋಷ್ಠಿ

0

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ 2022-23ನೇ ಆರ್ಥಿಕ ವರ್ಷದಲ್ಲಿ ನಿವ್ವಳ ರೂ.17.98 ಲಾಭ ಗಳಿಸಿ ಸದಸ್ಯರಿಗೆ ಶೇ.7 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು ಅವರು ಆ.26 ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

“ಸದಸ್ಯತನದಲ್ಲಿ 7.27 ಪ್ರಗತಿ ಸಾಧಿಸಿರುವ ಸಂಘವು 3,865 ಸದಸ್ಯರನ್ನು ಹೊಂದಿದ್ದು 1.31 ಕೋಟಿ ರೂ.ಗಿಂತ ಅಧಿಕ ಪಾಲು ಭಂಡವಾಳ ಹೊಂದಿದೆ.ವರದಿ ವರ್ಷದಲ್ಲಿ ರೂ.4.19 ಲಕ್ಷ ಮೌಲ್ಯದ 870.300 ಕಿಲೋ ಕಾಳುಮೆಣಸು ಖರೀದಿ ಮಾಡಲಾಗಿದೆ. ಜಿ.ಗುರುವಾಯನಕೆರೆಯಲ್ಲಿ ಮಾಸ್ ಸಂಸ್ಥೆಯ ಸಹಕಾರದಲ್ಲಿ ಶೀಘ್ರದಲ್ಲಿ ಅಡಿಕೆ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.

ಬೆಳೆಗಾರರು ಕನಿಷ್ಠ 10 ಕಳುಹಿಸಿಕೊಟ್ಟಲ್ಲಿ ಸಂಘದ ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ ತರಗತಿಯನ್ನು ಉಚಿತವಾಗಿ ಮಾಡಲಾಗುವುದು ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಅನಂತ ಭಟ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ, ನಿರ್ದೇಶಕರಾದ ಬೈರಪ್ಪ, ಕೆ.ರಾಮ ನಾಯ್ಕ್ ,ಸೋಮನಾಥ ಬಂಗೇರ, ಪದ್ಮ ಗೌಡ ಎಚ್., ಕೆ.ಜೆ.ಆಗಸ್ಟಿನ್, ವಿ.ವಿ.ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ವಿಶೇಷ ಆಹ್ವಾನಿತ ಅಬ್ರಾಹಂ ಬಿ.ಎಸ್., ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here