ಧರ್ಮಸ್ಥಳ-ನಾರಾವಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಮುಂದೂಡಲಾಗಿದೆ-ಜಿಲ್ಲಾ ಉಸ್ತುವಾರಿ ಸಚಿವರಿಂದ ಶೀಘ್ರದಲ್ಲಿ ಚಾಲನೆ

0

ಬೆಳ್ತಂಗಡಿ: ಧರ್ಮಸ್ಥಳದಿಂದ ನಾರಾವಿಗೆ ಕೆ.ಎಸ್. ಆರ್. ಟಿ.ಸಿ. ಬಸ್ ಸಂಚಾರ ಮುಂದೂಡಲಾಗಿದೆ.ಕಳೆದ ಹಲವಾರು ವರ್ಷಗಳಿಂದ ನಾರಾವಿಗೆ ಸರ್ಕಾರಿ ಬಸ್ ಸಂಚಾರಕ್ಕಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವಾರೂ ಮಂದಿ ಶಾಸಕರು ಸೇರಿದಂತೆ ವಿವಿಧ ರೀತಿಯಲ್ಲಿ ಮನವಿಯ ಮೂಲಕ ಬೇಡಿಕೆ ಇಟ್ಟಿದ್ದರು.ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಧರ್ಮಸ್ಥಳದಿಂದ ನಾರಾವಿಗೆ ಬಸ್ ಸಂಚಾರ ಆ. 25 ಶುಕ್ರವಾರ ಬೆಳಗ್ಗೆ ಪ್ರಾರಂಭವಾಗಲಿದೆ ಎಂಬ ಬಗ್ಗೆ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿತ್ತು.ಇದರಿಂದಾಗಿ ಆ ಭಾಗದ ಜನರು ಕೊನೆಗೂ ನಮ್ಮೂರಿಗೆ ಸರ್ಕಾರಿ ಬಸ್ ಬರುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಬಸ್ ಸ್ವಾಗತಿಸಲು ಅಣಿಯಾಗಿದ್ದರು.ಆದರೆ ಈಗ ಅವರಿಗೆ ನಿರಾಸೆ ಕಾದಿದೆ. ಕಾರಣ ಬಸ್ ಸಂಚಾರ ಮುಂದೂಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಸ್ ಸಂಚಾರ ಮುಂದೂಡಲು ಬೆಳ್ತಂಗಡಿಯ ರಾಜಕೀಯ ತಡೆ ಕಾರಣ ಎಂಬ ತಿಳಿದು ಬಂದಿದೆ.ಕಳೆದ ಎರಡು ದಿನಗಳ ಹಿಂದೆ ಕೆಎಸ್ ಆರ್ ಟಿಸಿ ಧರ್ಮಸ್ಥಳದಿಂದ ನಾರಾವಿಗೆ ಸಂಚಾರಿಸುವ ಬಸ್ ಸಮಯದ ಅಧಿಕೃತ ಪಟ್ಟಿಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರ ಕೋರಿಕೆಯ ಮೇರೆಗೆ ಎಂದು ನಮೂದಿಸಲಾಗಿತ್ತು.ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕ ಹರೀಶ್ ಪೂಂಜರ ಹೆಸರಲ್ಲಿ ಅಭಿನಂದನೆಗಳ ಪೋಸ್ಟರ್ ಗಳು ಹರಿದಾಡುತಿತ್ತು.ಆದರೆ ಇದು ಶಾಸಕರ ಪ್ರಯತ್ನದಿಂದ ಅಲ್ಲ ಮಾಜಿ ಶಾಸಕ ವಸಂತ ಬಂಗೇರ ಅವರು ಕಳೆದ ಒಂದು ತಿಂಗಳ ಹಿಂದೆ ಸ್ಥಳೀಯರು ನೀಡಿದ ಮನವಿಯಂತೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರಿಂದಾಗಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಕಳೆದ 5 ವರ್ಷಗಳಲ್ಲಿ ಶಾಸಕರು ಯಾಕೆ ಬಸ್ ವ್ಯವಸ್ಥೆ ಮಾಡಿಲ್ಲ ಎಂಬ ಸಂದೇಶಗಳು ಮನವಿ ಪತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಈ ಎಲ್ಲ ಗೊಂದಲಗಳಿಂದಾಗಿ ಬಸ್ ಸಂಚಾರಕ್ಕೆ ರಾಜಕೀಯದಿಂದಾಗಿ ವಿಘ್ನ ಉಂಟಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಜಿಲ್ಲಾ ಉಸ್ತುವಾರಿ ಸಚಿವರಿಂದ ಶೀಘ್ರದಲ್ಲಿ ಚಾಲನೆ ಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

p>

LEAVE A REPLY

Please enter your comment!
Please enter your name here