ಲಾಯಿಲ ಪಡ್ಲಾಡಿ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಲಾಯಿಲ ಪಡ್ಲಾಡಿ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ ನೆರವೇರಿತು.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸೂರಪ್ಪರವರು ಧ್ವಜಾರೋಹಣವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಊರ ಹಿರಿಯರಾದ ಆನಂದ ಪೂಜಾರಿ, ಶಾಲಾ ಎಸ್.ಡಿ.ಎಂ.ಸಿ ನಾಮನಿರ್ದೇಶಕ ಪ್ರಸಾದ್ ಏಣಿಂಜೆ, ಗ್ರಾ.ಪಂ ಸದಸ್ಯೆ ಜಯಂತಿ, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಊರವರು ಹಾಗೂ ಅಂಗನವಾಡಿ ಮಕ್ಕಳು ಶಾಲಾ ಮಕ್ಕಳ ಜೊತೆ ಸೇರಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ನ್ನು ದೇಣಿಗೆಯಾಗಿ ಆನಂದ ಪೂಜಾರಿ ಮತ್ತು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದಿವಾಕರ ಸುವರ್ಣ ರವರು ವಿತರಿಸಿದರು.ಸ್ವಾತಂತ್ರೋತ್ಸವದ ಬಗ್ಗೆ ಮಕ್ಕಳಿಗೆ ಹಾಗೂ ಊರವರಿಗೆ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಇದರ ಬಹುಮಾನದ ಪ್ರಾಯೋಜಕರಾಗಿ ಗ್ರಾ.ಪಂ.ಸದಸ್ಯೆ ಜಯಂತಿ ದಯಾನಂದ ರವರು ವಹಿಸಿಕೊಂಡರು.

ಮಕ್ಕಳ ಹಾಗೂ ಊರವರ ಮನರಂಜನಾ ಕಾರ್ಯಕ್ರಮದ ಬಳಿಕ ಲಾಯಿಲ ಗ್ರಾ.ಪಂ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.ಮಧ್ಯಾಹ್ನ ಊಟದ ವ್ಯವಸ್ಥೆಗೆ ಅಚ್ಯುತ ಗೌಡ ಇವರು ಅಕ್ಕಿ ಕೊಟ್ಟು ಸಹಕರಿಸಿದರು.
ತರಕಾರಿ ವ್ಯವಸ್ಥೆಗೆ ಸುರೇಶ್, ಜ್ಯೋತಿ, ಪಾಯಸದ ವ್ಯವಸ್ಥೆ ರಮೇಶ್ ಆಚಾರ್ಯ ಹಾಗೂ ಸಿಹಿ ತಿಂಡಿ ವ್ಯವಸ್ಥೆಗೆ ಪೀಟರ್ ಪಿಂಟೋ ಮತ್ತು ಉತ್ಸಾಹಿ ಯುವಕ ಮಂಡಲ ಲಾಯಿಲ ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಸಹಕರಿಸಿದರು.ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯೋಜಕರಾದ ಗೀತಾ ರವರು ಸಹಕಾರವಿತ್ತರು.
ಅಂಬೇಡ್ಕರ್ ಉಸ್ತುವಾರಿ ಸಮಿತಿ, ಶ್ರೀ ಕೃಷ್ಣಾ ಅಷ್ಟಮಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳು ಸಹಕರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್ ಸ್ವಾಗತಿಸಿ, ಸಹಶಿಕ್ಷಕ ಯೋಗೇಶ್.ಬಿ ಧನ್ಯವಾದವಿತ್ತರು.
ಅತಿಥಿ ಶಿಕ್ಷಕಿಯಾದ ಶಾರದಾ, ಗೌರವ ಶಿಕ್ಷಕ ಚಂದ್ರಕಲಾ ಮತ್ತು ರಮ್ಯ ರವರು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿಕೊಟ್ಟರು.ಅಡುಗೆ ಸಿಬ್ಬಂದಿಗಳು ಊಟದ ವ್ಯವಸ್ಥೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here