ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಎಸ್.ಡಿ.ಎಂ ಕಲಾಕೇಂದ್ರದಲ್ಲಿರುವ ಯಕ್ಷಗಾನ ಕಲಾಕೇಂದ್ರದಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಯಕ್ಷಗಾನ ತರಬೇತಿಯನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಯಕ್ಷಗಾನ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಯ ಹಾಗೂ ಮೇಳದ ಮಹತ್ವವನ್ನು ವಿವರಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಮೋನಿಷಾ.ಕೆ.ಎಲ್. ಇವರು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಸಿಂಚನ ಮುಡುಕೋಡಿ ಇವರು ಭಾಗವತಿಕೆಯ ಮೂಲಕ ಪ್ರಾರಂಭಿಸಿದರು.
ಈ ಕಾರ್ಯಕ್ರಮದ ಅತಿಥಿಗಳಾಗಿ ಮುಖ್ಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಬಿ.ಸೋಮಶೇಖರ್ ಶೆಟ್ಟಿ ಹಾಗೂ ಕಲಾಕೇಂದ್ರದ ನೃತ್ಯ ತರಬೇತುದಾರರಾದ ವಿದೂಷಿ ಚೈತ್ರ ಭಟ್ ಹಾಗೂ ಯಕ್ಷಗಾನ ಕಲಾಕೇಂದ್ರದ ಯಕ್ಷಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ ಇವರು ಉಪಸ್ಥಿತರಿದ್ದರು.
ಸುಮಾರು 52 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೇಂದ್ರದ ಯಕ್ಷಗಾನ ತಂಡವು ಅನೇಕ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೆ, ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶ್ರದ್ದೆ ಹಾಗೂ ಶಿಸ್ತಿನಿಂದ ಅಭ್ಯಾಸದಲ್ಲಿ ನಿರತರಾಗಿ ಸಾಧಿಸಬೇಕೆಂದು ತಿಳಿಸಿದರು.ಕಲಾಕೇಂದ್ರದ ಶಿಸ್ತನ್ನು ಹಾಗೂ ಜೀವನದ ಮೌಲ್ಯವನ್ನು ಅಳವಸಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.