ಉಜಿರೆ: ಪ್ರಗತಿ ಮಹಿಳಾ ಮಂಡಲ(ರಿ)ಉಜಿರೆ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಇತ್ತೀಚೆಗೆ ಗ್ರಾಮ ಪಂಚಾಯತ್ ನ ಪ್ರೇರಣಾ ಸಭಾಂಗಣದಲ್ಲಿ ನಡೆಸಲಾಯಿತು.
ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.ಡಾ.ಗೀತಾಕಎ.ಜೆ. ಸಹಾಯಕ ಪ್ರಾಧ್ಯಾಪಕಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಶ್ರೀ ಧರ್ಮಸ್ಥಳ ಕಾಲೇಜು ಉಜಿರೆ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಆಟಿಯ ಮಹತ್ವದ ಬಗ್ಗೆ ವಿವರಿಸಿದರು.
ಡಾ.ಗೀತಾ ಎ ಜೆ ಇವರನ್ನು ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.ಸದಸ್ಯರಿಗೆ ಆಟಿ ಅಡುಗೆ ಸ್ಪರ್ಧೆಹಾಗೂ ಇತರ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು.ಸದಸ್ಯರು 30ಕ್ಕೂ ಅಧಿಕ ಖಾದ್ಯಗಳನ್ನು ತಯಾರಿಸಿ ತಂದರು.ಶೋಭಾ ಅವಿನಾಶ್ ಇವರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಸಹಕರಿಸಿದರು.ಗೀತಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪೂರ್ಣಿಮಾ ತುಳುವಿನಲ್ಲಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗಾಯತ್ರಿ ಧನ್ಯವಾದ ಸಮರ್ಪಿಸಿದರು.
p>