


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ತಾಲೂಕು ಆಡಳಿತ ಸೌಧ ಆವರಣದಲ್ಲಿ ನಡೆಯಿತು.
ನಗರದಲ್ಲಿ ಮೆರವಣಿಗೆಯೊಂದಿಗೆ ಬಂದು ತಾಲೂಕು ಆವರಣದಲ್ಲಿ ಪಥ ಸಂಚಲನ ನಡೆಯಿತು.ತಹಸೀಲ್ದಾರ್ ಟಿ. ಸುರೇಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.



ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ನಿವೃತ್ತ ಪ್ರಾಂಶುಪಾಲ ಪ್ರೊ.ಗಣಪತಿ ಭಟ್ ಕುಳಮರ್ವ ಪ್ರಧಾನ ಭಾಷಣಗೈದರು. ಬೆಳ್ತಂಗಡಿ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ಬೆಳ್ತಂಗಡಿ ಎಸ್ ಡಿ ಎಂ ಶಾಲಾ ಮಕ್ಕಳಿಂದ ಝಂಡಾ ಊಂಚ, ಬೆಳ್ತಂಗಡಿ ವಾಣಿ ಶಾಲಾ ಮಕ್ಕಳಿಂದ ನಾಡ ಗೀತೆ, ಬೆಳ್ತಂಗಡಿ ಸಂತ ತೇರೆಸಾ ಶಾಲಾ ವಿದ್ಯಾರ್ಥಿಗಳಿಂದ ರೈತ ಗೀತೆ ಹಾಡಿದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಬಿ. ಕುಸುಮಾಧರ್ ಸ್ವಾಗತಿಸಿದರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್, ಗೃಹರಕ್ಷಕ ದಳ, ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.









