ಕನ್ಯಾಡಿ: ಸರಕಾರಿ ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-1 ಇಲ್ಲಿ 7ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ನೋಣಯ್ಯ ಗೌಡ, ಅತಿಥಿಗಳಾಗಿ ಆಗಮಿಸಿದ್ದ ಅಭಿನಂದನ್ ಹರೀಶ್ ಕುಮಾರ್, ಪಂಚಾಯತ್ ಸದಸ್ಯರುಗಳಾದ ಪ್ರವೀಣ್ ವಿ ಜೆ, ಜಯ ಶೆಟ್ಟಿ, ಸುಮಿತ್ರ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಉಮಾವತಿ, ಕಪುಚಿನ್ ಸೇವಾ ಕೇಂದ್ರದ ಲವೀನ ಜ್ಯೋತಿ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ಹನುಮಂತರಾಯ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಉದ್ಘಾಟನೆಗೊಂಡಿತು.ನಂತರ ಕಪುಚಿನ್ ಸೇವಾ ಕೇಂದ್ರದ ಜ್ಯೋತಿ ಇವರು ವೇದಿಕೆ ಮುಂಭಾಗದಲ್ಲಿ ಹಿಂದಿನ ಕಾಲದ ವಿವಿಧ ವಸ್ತುಗಳು ಅವುಗಳ ಉಪಯೋಗಗಳ ಬಗ್ಗೆ ಮಕ್ಕಳು ತಿಳಿದಿರಬೇಕು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪ್ರಸ್ತುತ ಸಾಲಿನಿಂದ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಸಿರಿ ಯೋಜನೆಗೆ ದಾನಿಗಳಾದ, ವಿಧಾನಪರಿಷತ್ ಶಾಸಕರಾದ ಹರೀಶ್ ಕುಮಾರ್ ಇವರ ಮಗನಾದ ಅಭಿನಂದನ್ ಇವರು ಮಕ್ಕಳಿಗೆ ಬಾಂಡ್ ಅನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.ಈ ಯೋಜನೆಯಲ್ಲಿ 1ನೇ ತರಗತಿಗೆ ದಾಖಲಾಗುವ ಮಗುವಿನ ಹೆಸರಿನಲ್ಲಿ ಒಂದು ಸಾವಿರ ರೂಪಾಯಿಯನ್ನು ಎಫ್ ಡಿ ಇಡಲಾಗುತ್ತದೆ.ಪ್ರಮುಖವಾಗಿ ಶಾಲಾ ದಾಖಲಾತಿಯು ಹೆಚ್ಚಳವಾಗಲಿ ಎಂಬ ಪ್ರಮುಖವಾದ ಕಾರಣದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಯಿತು.
ನಂತರ ಮಾತನಾಡಿದ ಅಭಿನಂದನ್ ಇವರು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಪಾಲಕರು ಮಕ್ಕಳು ಹಾಗೂ ಊರಿನವರು ಒಟ್ಟಿಗೆ ಶಾಲೆಯಲ್ಲಿ ನಡೆಸುವ ಕಾರ್ಯವು ಶ್ಲಾಘನೀಯವಾಗಿದ್ದು, ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಹಾಗೂ ಶಾಲೆಯಲ್ಲಿ ವಿದ್ಯಾಸಿರಿ ಯೋಜನೆಯಲ್ಲಿ ಮುಂದಿನ ವರ್ಷ ಇನ್ನೂ ಹೆಚ್ಚಿನ ಮಕ್ಕಳು ಫಲಾನುಭವಿಗಳಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡ ಊರಿನ ಹಿರಿಯರು ಹಾಗೂ ಸಾಧಕರಾದ ಪರಮೇಶ್ವರ್ ಶೆಟ್ಟಿ ಇವರನ್ನು ಸರ್ವರ ಪರವಾಗಿ ಗುರುತಿಸಿ, ಸನ್ಮಾನಿಸಲಾಯಿತು.
ಶಿಕ್ಷಕರಾದ ವಿಕಾಸ್ ಕುಮಾರ್ ಇವರು ಆಗಮಿಸಿದ್ದ ಪಾಲಕರಿಗೆ ಶಾಲೆಯ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ವಿವಿಧ ಪ್ರಶ್ನೆಗಳನ್ನು ಹಾಗೂ ಶ್ರೀಮತಿ ಲೋಕೇಶ್ವರಿ ಇವರು ತುಳು ಗಾದೆ ಮಾತುಗಳನ್ನು ಪೂರ್ಣಗೊಳಿಸಲು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ವಿ.ಜೆ ಇವರು ಆಟಿದೊಂಜಿ ದಿನ ಕಾರ್ಯಕ್ರಮದ ಮಹತ್ವ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾದ, ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡರು.
ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನೋಣಯ್ಯ ಗೌಡ ಇವರು ಸ್ಟೇಜನ್ನು ಇಷ್ಟು ಸುಂದರವಾಗಿ ಅಲಂಕರಿಸಿದ ಮಕ್ಕಳು ಶಿಕ್ಷಕರು ವಂದನೆಗಳನ್ನು ತಿಳಿಸಿದರು.ಹಾಗೂ ಈ ಕಾರ್ಯಕ್ರಮಕ್ಕೆ ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ತಿಂಡಿ ತಿನಿಸುಗಳನ್ನು ತಂದ ಎಲ್ಲಾ ಪಾಲಕರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ 8ನೇ ತರಗತಿಯ ನವ್ಯಶ್ರೀ ಬಳಗದವರು ಪ್ರಾರ್ಥಿಸಿದರೆ, ಪ್ರಮೀಳಾ ಇವರು ಸ್ವಾಗತಿಸಿದರು ಹಾಗೂ ಹರಿತಾ ಇವರು ಸನ್ಮಾನಿತರನ್ನು ಪರಿಚಯಿಸಿದರು ಹಾಗೂ ಆಗಮಿಸಿದ್ದ ಸರ್ವರಿಗೂ ನಿಶ್ಮಿತಾ ಇವರು ಧನ್ಯವಾದವಿತ್ತರು.ಇಡೀ ಕಾರ್ಯಕ್ರಮವನ್ನು ಲೋಕೇಶ್ವರಿ ಇವರು ಸುಂದರವಾಗಿ ನಿರೂಪಿಸಿದರು.
ನಂತರ ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯನ್ನು ನಡೆಸಲಾಯಿತು.ಕಡಿಮೆ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರಣ, ದಿನಾಂಕ 20-08-2023 ಆದಿತ್ಯವಾರ ಹಳೆ ವಿದ್ಯಾರ್ಥಿ ಸಂಘದ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು.