ಗುರುವಾಯನಕೆರೆ: ನಾಲ್ಕು ವರ್ಷಗಳಿಗೊಮ್ಮೆ ಜಾಗತಿಕ ಮಟ್ಟದಲ್ಲಿ ನಡೆಯುವ ವಿಶ್ವ ಜಾಂಬೂರಿ ಈ ಬಾರಿ ಕೊರಿಯಾ ದೇಶದಲ್ಲಿ ನಡೆಯಲಿದ್ದು, ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಕುಲಾ ಎಂ. ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿ ವಂಶಿ ಪಾಲ್ಗೊಳ್ಳಲಿದ್ದಾರೆ.ಇವರು ಮೂರ್ಜೆ ಹೇಮ ಗ್ರಾನೆಟ್ಸ್ ಮಾಲಕ ಹೇಮಂತ್ ಕುಮಾರ್ ಮತ್ತು ವಿಶಾಲ ದಂಪತಿಯ ಮಕ್ಕಳು.
ದೇಶದ ಸಂಸ್ಕೃತಿಯನ್ನು ಬಿಂಬಿಸುವ, ಕ್ರಿಯಾಶೀಲತೆ, ನಾಯಕತ್ವ, ಕೌಶಲ್ಯ ಮತ್ತು ವೈಯಕ್ತಿಕ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕನಸುಗಳನ್ನು ಹಂಚಿಕೊಳ್ಳಿ ಎನ್ನುವ ಧ್ಯೇಯದೊಂದಿಗೆ ಆಗಸ್ಟ್ 1ರಿಂದ 12ರವರೆಗೆ ಈ ಬಾರಿಯ ವಿಶ್ವ ಜಾಂಬೂರಿ ಸಂಪನ್ನಗೊಳ್ಳಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಬೃಹತ್ ಜಾಂಬೂರಿಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದ ವಿದ್ಯಾರ್ಥಿಗಳಿಗೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮತ್ತು ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಅಭಿನಂದಿಸಿ ಗೌರವಿಸಿದ್ದಾರೆ.
p>