ಸುಲ್ಕೇರಿಮೊಗ್ರು ವರ್ಪಾಳೆ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯ

0

ಅಳದಂಗಡಿ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿವತಿಯಿಂದ ಜು.27ರಂದು ಸ್ವಚ್ಚ ಗೊಳಿಸಿಸದರು.

ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಅಳದಂಗಡಿ ವಲಯ ಸುಲ್ಕೇರಿಮೊಗ್ರು ವ್ಯಾಪ್ತಿಯಲ್ಲಿರುವ.ವರ್ಪಾಳೆ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಲ್ಲಿ ಪ್ರವಾಹಕ್ಕೆ ತೇಲಿ ಬಂದ ಮರಗಳು ಹಾಗೂ ಇತರ ಕಸ ಕಡ್ಡಿಗಳು ಸೇರಿಕೊಂಡು ನೀರಿನ ಸರಾಗವಾಗಿ ಹರಿಯುವಿಕೆಗೆ. ತೊಂದರೆಯಾಗಿದ್ದು ಪ್ರವಾಹ ಹೆಚ್ಚಾದಲ್ಲಿ ನದಿಯ ನೀರು ತೋಟಗಳಿಗೆ ನುಗ್ಗಿ ಹಾನಿಯಾಗುವ ಸಂಭವ ಇತ್ತು. ಇಂದು ಮಳೆ ಸ್ವಲ್ಪ ಕಡಿಮೆ ಇರುವ ಕಾರಣ ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ ಅವರ ಗಮನಕ್ಕೆ ತಂದು ನದಿಯ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

ಸ್ವಯಂಸೇವಕರಾದ ಪ್ರಕಾಶ್ ಕೊಲ್ಲಂಗೆ ಘಟಕ ಪ್ರತಿನಿಧಿ ರಾಜೇಶ್ ಕುದುರು, ಪ್ರವೀಣ್ ನಿನಿಗಲ್, ರವಿಚಂದ್ರ ಹಾಗೂ ಶ್ರೀಕಾಂತ್ ರವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು.

ಸ್ವಯಂ ಪ್ರೇರಣೆಯಿಂದ ಸ್ಥಳೀಯರಾದ ಸುರೇಶ್ ಹಾಗೂ ವಿನೋದ್ ರವರು ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾರ್ ಸ್ಥಳಕ್ಕೆ ಆಗಮಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು ಸ್ವಯಂ ಸೇವಕರ ಕಾರ್ಯಕ್ಕೆ ಮೆಚ್ಚಿ ವಿನೋದ್ ರವರು ಸ್ವ ಇಚ್ಛೆಯಿಂದ ಸ್ವಯಂ ಸೇವಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು.

LEAVE A REPLY

Please enter your comment!
Please enter your name here