ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜುಲೈ 8ರಂದು ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಸಂಘದ ಕಾರ್ಯದರ್ಶಿ ಅನಿತಾ ಗತಸಭೆಯ ವರದಿಯನ್ನು ಮಂಡಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ ಕ್ಲಿಫರ್ಡ್ ಪಿಂಟೋರವರು ಶಾಲಾ ನೂತನ ಸಂಚಾಲಕರಾದ ಅತೀ ವಂ.ಫಾ.ವಾಲ್ಟರ್ ಡಿಮೆಲ್ಲೋರವರನ್ನು ಪರಿಚಯಿಸಿ ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯ ಯೋಜನೆಗಳ ಪಕ್ಷಿನೋಟವನ್ನು ಸಭೆಯ ಮುಂದಿಟ್ಟರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಹಪಠ್ಯ ಚಟುವಟಿಕೆಗಳ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. 2022-23ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿನಿ ಕು. ಲೂಹ ಮರಿಯಮ್ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.ಹಾಗೆಯೇ ಶಾಲೆ ನೂರು ಶೇಕಡಾ ಫಲಿತಾಂಶ ಪಡೆಯಲು ಶ್ರಮವಹಿಸಿದ ಶಿಕ್ಷಕ ವೃಂದವನ್ನು ಅಭಿನಂದಿಸಲಾಯಿತು.ಶಾಲೆಗೆ ಹೊಸದಾಗಿ ನೇಮಕಗೊಂಡ ಸಹ ಶಿಕ್ಷಕಿಯರನ್ನು ಅಭಿನಂದಿಸಲಾಯಿತು.ಪೋಷಕರು ಮನೆಯಲ್ಲಿ ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣವನ್ನು ಕಲ್ಪಿಸಬೇಕು. ಪೋಷಕರು ತಮ್ಮ ನಡವಳಿಕೆಯಿಂದ ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳು ವರ್ತನೆಯಲ್ಲಿ ಎಡವಿದರೆ ಅವರನ್ನು ಭಾವನಾತ್ಮಕವಾಗಿ ಪ್ರೀತಿಯಿಂದ ಸೂಕ್ಷ್ಮವಾಗಿ ಬದಲಿಸುವುದು ಪೋಷಕರ ಜವಾಬ್ದಾರಿ ಎಂದು ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಗುರುವಾಯನಕೆರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ, ನಾಟಕ ಬರಹಗಾರ, ನಟ, ಕ್ರಿಯಾಶೀಲ ಶಿಕ್ಷಕ, ‘ಶಿಕ್ಷಣ ಸಾರಥಿ ‘ ಹಾಗೂ ‘ಶಿಕ್ಷಣ ಜ್ಞಾನ ಜ್ಯೋತಿ’ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಅವರು ನುಡಿದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಬೊನವೆಂಚರ್ ಪಿಂಟೋ ರವರು ಪೋಷಕರು ಶಾಲೆಗೆ ಬೆನ್ನೆಲುಬಾಗಿ ನಿಂತು ಶಾಲೆಯ ಪ್ರತಿ ಚಟುವಟಿಕೆಗಳಲ್ಲಿಯೂ ಸಹಕರಿಸಬೇಕೆಂದು ತಿಳಿಸಿದರು.
ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋರವರು ಪೋಷಕರಿಗೆ ಮಕ್ಕಳ ವರ್ತನೆಯ ಕಡೆಗೆ ಗಮನವಹಿಸಿ, ಶಿಸ್ತನ್ನು ಕಲಿಸಿ ಮತ್ತು ಕಷ್ಟದ ಜೀವನದ ಅನುಭವವನ್ನು ಮಕ್ಕಳಿಗೆ ಪರಿಚಯಿಸಿ ಎಂದು ನುಡಿದು ಶುಭ ಹಾರೈಸಿದರು.
ಶಿಕ್ಷಕರಕ್ಷಕ ಸಂಘಕ್ಕೆ ನೂತನವಾಗಿ ಪ್ರತಿನಿಧಿಗಳ ಆಯ್ಕೆಯನ್ನು ಮಾಡಲಾಯಿತು. ಸಭೆಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ವಿಲ್ಮಾ ರೇಗೊ ಹಾಗೂ ಪೋಷಕರು ಉಪಸ್ಥಿತರಿದ್ದರು.ಸಹಶಿಕ್ಷಕಿ ಎಲ್ವಿಟಾ ಪಾಯಸ್ ಹೊಸ ಶಿಕ್ಷಕಿಯರನ್ನು ಪರಿಚಯಿಸಿದರು ಹಾಗೂ ಸಹಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ಸಂಪನ್ಮೂಲ ವ್ಯಕ್ತಿ ಯವರ ಕಿರುಪರಿಚಯ ಮಾಡಿದರು.ಸಹಶಿಕ್ಷಕಿಯರಾದ ಪಲ್ಲವಿ ಸ್ವಾಗತಿಸಿ, ಲೋನಾ ಲೋಬೊ ವಂದಿಸಿದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರ್ವಹಿಸಿದರು.