ಬೆಳ್ತಂಗಡಿ: ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾ ಮ್ಹಾಲಕರ ಸಂಘ(ರಿ.)ಬೆಳ್ತಂಗಡಿ ಘಟಕ ಹಾಗೂ ಜಿಲ್ಲಾ ಮಿಲನನೋತ್ಸವ 2023, ಲಾಂಛನ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಜು.10 ರಂದು ಕೆದ್ದು-ಅಲಡ್ಕ ಶ್ರೀ ದೀಪಾ ಸಭಾಭವನದಲ್ಲಿ ಜರುಗಿತು.
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮ್ಹಾಲಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬು ಕೆ.ವಿಟ್ಲ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ತಾಲೂಕು ಸಂಘ ದ ಸದಸ್ಯರು ತಮ್ಮನ್ನು ತೊಡಗಿಸಿಕೊಂಡ ಯಶಸ್ವಿ ಗೊಳಿಸುವ ಮೂಲಕ ಸಂಘವನ್ನು ಬಲಪಡಿಸ ಬೇಕು ಎಂದು ಹೇಳಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ನೇರವೇರಿಸಿ ಜಿಲ್ಲಾ ಮಿಲನೋತ್ಸವ 2023 ಕಾರ್ಯಕ್ರಮ ಯಶಸ್ವಿಗೆ ಸಹಕರಿಮಸ ಬೇಕು ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾ, ತಾಲೂಕು ಘಟಕಗಳ ವಿವಿಧ ಬಣ್ಣದ ಧ್ವಜಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಿಶಿತ್ ಸುವರ್ಣ, ಅಬ್ದುಲ್ ಲತೀಫ್, ಯುವರಾಜ್ ಸುವರ್ಣ, ಪಿಯುಸ್ ಮ್ಯಾಕ್ಸಿಮ್ ಸಿಕ್ವೇರಾ ಬಂಟ್ವಾಳ, ಗಣಪತಿ ಪೈ ಮೂಡಬಿದ್ರೆ,ಬಾಲಕೃಷ್ಣ ಕದ್ರಿ ಮಂಗಳೂರು, ಶಿವಪ್ರಸಾದ್ ಹೆಗ್ಡೆ ಮೂಡಬಿದ್ರೆ, ಕ್ಲೆವರ ಡಿಸೋಜ ಮಂಗಳೂರು, ಧರ್ಣಪ್ಪ ಮೂಲ್ಯ, ಸುಕೇಶ್ ಜೈನ್, ಸುಭಾಷ್ ಚಂದ್ರ ಜೈನ್ ಬಂಟ್ವಾಳ, ಮನೋಹರ್, ಜನಾರ್ದನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಜಿಲಾ ಮಟ್ಟದ ಮಾಲಕರು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಬೆಳ್ತಂಗಡಿ ತಾಲೂಕು ಘಟಕ ಕಾರ್ಯದರ್ಶಿ ಹರೀಶ್ ಕುಮಾರ್ ಬಿ ಸ್ವಾಗತಿಸಿದರು.