ಸರಕಾರಿ ನೌಕರರ ಸಂಘದ ಬೆಳ್ತಂಗಡಿ ಶಾಖೆಯ ಮಹಾಸಭೆ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ತಾಲೂಕು ಶಾಖೆ ಬೆಳ್ತಂಗಡಿ ಇದರ ವಾರ್ಷಿಕ ಮಹಾ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಏಕತಾ ಸೌಧದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಕುಮಾರ್ ಅವರು ನೆರವೇರಿಸಿ ಮಾತನಾಡುತ್ತಾ ಸರಕಾರಿ ನೌಕರರ ಸಂಘ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ವಿಚಾರ.ನೌಕರ ಹಕ್ಕುಗಳಿಗಾಗಿ ಧ್ವನಿ ಯೆತ್ತುವುದರೊಂದಿಗೆ ಇಂತಹ ಕಾರ್ಯಗಳನ್ನು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯರಾಜ್ ಜೈನ್ ಅವರು ವಹಿಸಿ ಮಾತನಾಡಿ ಚುನಾವಣೆಯ ಕಾರಣದಿಂದಾಗಿ ಮುಂದೂಡಲಾಗಿದ್ದ ಮಹಾಸಭೆಯನ್ನು ಈಗ ನಡೆಸಲಾಗುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಧರ್ಮರಾಜ್ ಹತ್ಯಡ್ಕ, ಕೃಷ್ಣಪ್ಪ ಗೌಡ ಬೆಳಾಲು, ರಂಜಿತ್ ಉಜಿರೆ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ್, ಆರೋಗ್ಯ ಇಲಾಖೆಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಮಯ್ಯ ಹಾಗೂ ನೂತನ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪಡೆದ ಶಿಕ್ಷಕರುಗಳಾದ ರಾಧಾಕೃಷ್ಣ ಕೊಯ್ಯೂರು, ಅಮಿತಾನಂದ ಹೆಗ್ಡೆ, ರಾಮಚಂದ್ರ ದೊಡ್ಡಮನಿ, ರವೀಂದ್ರ, ಬಿ.ಎಸ್.ಬಿರಾದಾರ್ ಅವರನ್ನು ಹಾಗೂ ಸರಕಾರಿ ನೌಕರರ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪದ್ಮಪ್ರಿಯ, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಧುಶ್ರೀ, ಅನನ್ಯ, ರೋಹನ್, ನಿರಂಜನ್, ಶ್ರಾವ್ಯಾ ಡೋಂಗ್ರೆ,ವೈಭವ್ ಅವರನ್ನುಸನ್ಮಾನಿಸಲಾಯಿತು.

ಕಾರ್ಯಕ್ರಮಸಲ್ಲಿ ತಾಲೂಕು ಪಶು ವೈದ್ಯಾಧಿಕಾರಿ ಡಾ.ಮಂಜ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಿಯಾಜ್, ಸಂಘದ ತಾಲೂಕು ಕಾರ್ಯದರ್ಶಿ ಗಂಗಾ ರಾಣಿ, ಸಂಚಾಲಕ ಧರಣೇಂದ್ರಕುಮಾರ್, ಪ್ರಾಧಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್, ಹಾಗೂ ಇತರರು ಇದ್ದರು.

ರಾಜ್ಯ ಸಮಿತಿ ಸದಸ್ಯ ಆನಂದ್ ಸ್ವಾಗತಿಸಿದರು, ಕಾರ್ಯದರ್ಶಿ ಗಂಗಾ ರಾಣಿ ನ ಜೋಶಿ ವರದಿ ವಾಚಿಸಿದರು.ಆಂತರಿಕ ಲೆಕ್ಕ ಪರಿಶೋಧಕ ರಘುಪತಿ ರಾವ್ ಲೆಕ್ಕಪತ್ರ ಮಂಡಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಕ್ರ ದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ ವಂದಿಸಿದರು.

ಮೋಹಿನಿ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು, ಚಿದಾನಂದ ಹೂಗಾರ್, ಮಂಜ ನಾಯ್ಕ, ಆರತಿ, ಮೋಹಿನಿ, ಗಾಯತ್ರಿ ಹಾಗೂ ಸೀತಾರಾಮ ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here