ತಾಲೂಕು ಜನಜಾಗೃತಿ ವೇದಿಕೆಯ ಮಹಾಸಭೆ: ನೂತನ ಅಧ್ಯಕ್ಷರಾಗಿ ಕಾಸಿಂ ಮಲ್ಲಿಗೆಮನೆ ಅವಿರೋಧ ಆಯ್ಕೆ

0

ಬೆಳ್ತಂಗಡಿ: ತಾಲೂಕು ಜನಜಾಗೃತಿ ವೇದಿಕೆಯ ಸಭೆಯು ಅಧ್ಯಕ್ಷೆ ಶಾರದಾ ಆರ್ ರೈ ಅವರ ಅಧ್ಯಕ್ಷತೆಯಲ್ಲಿ ಜು.3 ರಂದು ಪಣೆಜಾಲಿನ ಸಂಭ್ರಮ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎಂ.ಎ ಕಾಸಿಂ ಮಲ್ಲಿಗೆಮನೆ, ಕಾರ್ಯದರ್ಶಿಯಾಗಿ ಗ್ರಾ.ಯೋ. ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಮತ್ತು ಕೋಶಾಧಿಕಾರಿಯಾಗಿ ಗಿರೀಶ್ ವೇಣೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಶುಭಹಾರೈಸಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಡಿ.ಎ ರಹಿಮಾನ್ ಮತ್ತು ತಿಮ್ಮಪ್ಪ ಗೌಡ ಬೆಳಾಲು, ಗ್ರಾಮಾಭಿವೃದ್ದಿ‌ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ‌ ಕುಲಾಲ್,
ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಅವರು ಕ್ರಿಯಾಯೋಜನೆ ಮಂಡಿಸಿ, ಉದ್ದೇಶಿತ ಕಾರ್ಯಯೋಜನೆಗಳನ್ನು ವಿವರಿಸಿದರು. ವಿವಿಧ ವಲಯಗಳ ಮೇಲ್ವಿಚಾರಕರಾದ
ಶಿವಾನಂದ ಕಣಿಯೂರು, ಶಾಲಿನಿ ವೇಣೂರು, ಸುಮಂಗಲ ಅಳದಂಗಡಿ, ಉಷಾ ಇಂದಬೆಟ್ಟು, ಹೇಮಾವತಿ ಪಡಂಗಡಿ, ಭಾಗೀರಥಿ ಕೊಕ್ಕಡ, ಧಮಯಂತಿ ನಾರಾವಿ, ವಿದ್ಯಾ ತಣ್ಣೀರುಪಂತ, ವಸಂತ ಕುಮಾರ್ ಮಡಂತ್ಯಾರು, ಅಚ್ಚುತ ಗುರುವಾಯನಕೆರೆ, ಪ್ರಶಾಂತ ಧರ್ಮಸ್ಥಳ, ಶಶಿಕಲಾ ಲಾಯಿಲ‌, ಗಣೇಶ್ ಕುಮಾರ್ ಗುರುವಾಯನಕೆರೆ, ವೇದಾ ಹೊಸಂಗಡಿ, ವನಿತಾ ಉಜಿರೆ, ರಾಜೇಶ್ ನೆರಿಯ ಮತ್ತು ಜನಾರ್ದನ ಮುಂಡಾಜೆ ಭಾಗಿಯಾಗಿದ್ದರು.‌ ಎಲ್ಲಾ ವಲಯಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷೆ ಶಾರದಾ ಆರ್ ರೈ ಅವರನ್ನು ಅಭಿನಂದಿಸಲಾಯಿತು. ನೂತನ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಮಾತನಾಡಿ ಎಲ್ಲರ ಸಹಕಾರ ಕೋರಿದರು.
ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ವಂದಿಸಿದರು.
ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ವರದಿ ಮಂಡಿಸಿದರು.‌

ವೇದಿಕೆಯ ಗೌರವಾಧ್ಯಕ್ಷರ ಮೇಲೆ ಅಪಪ್ರಚಾರದ‌ ಬಗ್ಗೆ ಖಂಡನೆ: ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾಗಿರುವ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಅಪಪ್ರಚಾರ ಮತ್ತು ತಪ್ಪು ಸಂದೇಶ ರವಾನೆ ಮಾಡುತ್ತಿರುವ ಕೆಲವು ಶಕ್ತಿಗಳ ಬಗ್ಗೆ ವೇದಿಕೆ ವತಿಯಿಂದ ಖಂಡಿಸಲಾಯಿತು. ಕಾನೂನಾತ್ಮಕ ಕ್ರಮಗಳ ಬಗ್ಗೆ ಹೆಜ್ಜೆ ಇಡುವ ಬಗ್ಗೆ ಚರ್ಚಿಸಲಾಯಿತು.

p>

LEAVE A REPLY

Please enter your comment!
Please enter your name here