ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಇoದು(ಜು.1) ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ವೈದ್ಯರಾದ ಡಿ ಧರಣೇoದ್ರ ಜೈನ್ ಅವರು ಮಕ್ಕಳು ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು.ದಿನನಿತ್ಯ ಬೆಳಿಗ್ಗೆ ಸ್ನಾನ ಮಾಡಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಿತವಾಗಿ ಆಹಾರ ಸೇವನೆ ಮಾಡಿ, ಜಾಸ್ತಿ ನೀರು ಕುಡಿಯಬೇಕು. ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿದೆ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಮುಖ್ಯ ಗುರುಗಳಾದ ಪಿ.ಸುಬ್ರಹ್ಮಣ್ಯ ರಾವ್ ಇವರು ಮನುಷ್ಯರು ಬದುಕಬೇಕಾದರೆ ಮೂಲಭೂತ ಅಗತ್ಯತೆಗಳೊಂದಿಗೆ ಆರೋಗ್ಯ ಕೂಡ ತುಂಬಾ ಮುಖ್ಯ.ಆರೋಗ್ಯವೇ ಬಾಗ್ಯ .ನಮ್ಮ ಅರೋಗ್ಯವನ್ನು ಕಾಪಾಡುವ ವೈದ್ಯರು ದೇವರಿಗೆ ಸಮಾನ ಎಂದು ನುಡಿದರು.
ವಿದ್ಯಾರ್ಥಿಗಳ ಪ್ರಾರ್ಥನೆ, ಶ್ರೀಜಾರವರು ಸ್ವಾಗತಿಸಿ, ಪೂರ್ಣಿಮಾ ವಂದನಾರ್ಪನೆಗೈದ ಈ ಕಾರ್ಯಕ್ರಮವನ್ನು ಗಿರಿಜಾ ನಿರೂಪಿಸಿದರು.ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಸಹಕರಿದರು.