ಉಜಿರೆ: 2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಜೂ.24ರಂದು ರಂದು ಅನುಗ್ರಹ ಕಾಲೇಜಿನಲ್ಲಿ ವಿಜ್ರಂಭಣೆಯಿಂದ ನೇರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಗ್ರಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ! ಫಾ! ಜೇಮ್ಸ್ ಡಿ’ಸೋಜ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂ!ಫಾ! ವಿಜಯ್ ಲೋಬೋ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಧ.ಮ.ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್ ಆಲ್ಬರ್ಟ್ ಸಲ್ಡಾನಾ ದೀಪ ಬೆಳಗಿಸುವುದರ ಮೂಲಕ ನೇರವೇರಿಸಿದರು. ಇವರು ತಮ್ಮ ಅತಿಥಿ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯ ಕ್ರಮದ ಚೌಕಟ್ಟಿನಿಂದ ಹೊರ ಬಂದು ಸುತ್ತ ಮುತ್ತಲಿನ ಬದಲಾವಣೆಗಳನ್ನು ಗಮನಿಸಿ, ಸಾಂಸ್ಕ್ರತಿಕ ಮೌಲ್ಯಗಳನ್ನು ಹಾಗೂ ಮಾನವೀಯ ಸಂಬಂಧಗಳನ್ನು ಬೆಳೆಸುವುದಕ್ಕೆ ವಿದ್ಯಾರ್ಥಿ ಸಂಘದ ನಾಯಕರಿಗೆ ಇದೊಂದು ಸುವರ್ಣ ಅವಕಾಶ. ಮಾನವನು ಎಷ್ಟು ವರ್ಷ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ ಹೇಗೆ ಸಮಯವನ್ನು ಸದುಪಯೋಗ ಪಡಿಸಿಕೊಂಡು ಬದುಕುತ್ತಾನೆ ಎನ್ನುವುದು ಮುಖ್ಯ ಎಂದು ಸ್ವಾರಸ್ಯಕರ ಕಥೆಯ ಮೂಲಕ ವಿವರಿಸಿದರು.
ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ಸಾಮ್‌ಸನ್ ಡಿ’ಸೋಜ ಸ್ವಾಗತಿಸಿ, ವಿದ್ಯಾರ್ಥಿಯಾದ ಎಲೆನ್ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿ ಸಂಘಧ ಕಾರ್ಯದರ್ಶಿ ಮರಿಯಾ ಮೋಲ್ ಧನ್ಯವಾದ ನೀಡಿದರು.
ಉಜಿರೆ: ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ
p>