ಬೆಳ್ತಂಗಡಿ: ಸಂತ ಅಲ್ಫೋನ್ಸ ಪಿಲ್ಗ್ರಿಮ್ ಚರ್ಚ್ ನೆಲ್ಯಾಡಿ ಇಲ್ಲಿನ ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ಬೆಳ್ತಂಗಡಿ ಇದರ ನೆಲ್ಯಾಡಿ ಘಟಕ ಹಾಗೂ ಕೆ ಎಸ್ ಎಂ ಸಿ ಎ ಯುವ ಘಟಕ ನೆಲ್ಯಾಡಿ ಹಾಗೂ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ನೆಲ್ಯಾಡಿ ಇದರ ಸಹಯೋಗದಲ್ಲಿ ಮುಂಗಾರು ಪೂರ್ವ ಗಾಳಿಗೆ ಹಾನಿಯಾದ ಮನೆಯ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ರಿಪೇರಿಗೊಳಿಸಿ ಮನೆ ಹಾಗೂ ಪರಿಸರವನ್ನು ಸ್ವಚ್ಛ ಗೊಳಿಸಿ ನೀಡಲಾಯಿತು.
ಈ ಕಾಯಕದಲ್ಲಿ ಕೆ ಎಸ್ ಎಂ ಸಿ ಎ ಅಧ್ಯಕ್ಷ ರಾದ ಶಿಬು ಪನಚಿಕ್ಕಲ್, ನೆಲ್ಯಾಡಿ ಚರ್ಚ್ ನ ಸಹಾಯಕ ಧರ್ಮ ಗುರೂಗಳಾದ ವಂದನಿಯ ಫಾ /ಬಿಪಿನ್ ವಂದನಿಯ ಭಗೀನಿಯರಾದ ಸಿಸ್ಟರ್ ಲಿಸ್ ಮಾತ್ಯು, ಸಿಸ್ಟೆರ್ ಎಲ್ಸಿಟ್, ಸಿಸ್ಟೆರ್ ಆಲ್ಫಿ ಯುವ ಘಟಕದ ಜಿಬಿನ್, ಜೇನಿನ್, ಜಿತಿನ್, ಜಿತಿನ್ ಜೋಜಿ ಆರ್ಲ,ಲಿಟ್ಟೋ,ಆನ್ಸಿಲ್,ಜಿನು ಆರ್ಲ, ಶಮಿಲ್ ಆರ್ಲ,ಡಿವಿನ್, ನಯನ್ ಹಾಗೂ ನೆಲ್ಯಾಡಿ ಚರ್ಚಿನ ಟ್ರಸ್ಟಿ ಗಳಾದ ಶ್ರಿ ಯುತ ಜೋಬಿ ಪರಪರಾಗತ್, ಬೇಬಿ ವಿ ಜೆ ನಯನ್ ಟ್ರೇಡರ್ಸ್ ನೆಲ್ಯಾಡಿ, ಪವಿತ್ರ ಹೃದಯ ಕಾನ್ವೆಂಟ್ ನೆಲ್ಯಾಡಿ,ಅಲ್ಫೋನ್ಸ ಚರ್ಚ್ ನ ಕೆ ಎಸ್ ಎಂ ಸಿ,ಎ ಎಸ್ ಎಂ ವೈ ಎಂ ಯುವ ಘಟಕ,ಮಹಿಳಾ ಘಟಕ,ಸಹಕರಿಸಿ ಆರ್ಥಿಕ ಸಹಾಯ ವನ್ನು ಒದಗಿಸಿದರು. ಸಹಕರಿಸಿದ ಎಲ್ಲ ರಿಗೂ ಕೆ ಎಸ್ ಎಂಸಿ ಎ ನಿರ್ದೇಶಕರು ಹಾಗೂ ಅಲ್ಪೊನ್ಸ ಚರ್ಚ್ ನ ಧರ್ಮ ಗುರುಗಳು ಆದ ವಂದನಿಯ ಶಾಜಿ ಮಾತ್ಯುಅಭಿನಂದಿಸಿ ಸತ್ಕಾರ್ಯಗಳು ನಿರಂತರವಾಗಲಿ ಎಂದು ಕರೆ ನೀಡಿದರು.