ಮಂಗಳೂರು: ವಿಭಿನ್ನ ಕಥಾ ಹಂದರವನ್ನು ಹೊಂದಿರುವ ‘ಬೇರ’ ಕನ್ನಡ ಚಲನಚಿತ್ರವು ಜೂನ್ ತಿಂಗಳಿನಲ್ಲಿ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ವಿನು ಬಳಂಜ ಹೇಳಿದರು.ಅವರು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾನವ ಕುಲದ ಒಳಿತಿಗಾಗಿ ಇರುವ ಧರ್ಮವು ಸ್ವಾರ್ಥ ಸಾಧನೆಗಾಗಿ ಬಳಕೆಯಾದಾಗ ಅದರಿಂದ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ವಸ್ತುವನ್ನು ಇಟ್ಟುಕೊಂಡು ‘ಬೇರ’ ಚಿತ್ರವನ್ನು ನಿರ್ದೇಶನ ಮಾಡಲಾಗಿದೆ.ಬೇರ ಎಂದರೆ ವ್ಯಾಪಾರ.ಮೌಲ್ಯಗಳು ವ್ಯಾಪಾರದ ಸರಕು ಆಗಬಾರದು.ವ್ಯಾಪಾರದ ಸರಕು ಆದಾಗ ಮಾನವೀಯತೆ ಮೌನ ಆಗುತ್ತದೆ.ಇಂತಹ ಬೇರಗಳನ್ನು ಮೀರಿ ನಿ೦ತಾಗ ಸುಂದರ ಬದುಕು, ಸಮೃದ್ಧ ಸಮಾಜ ನಿರ್ಮಾಣ ಆಗುತ್ತದೆ ಎಂಬುದು ಸಿನಿಮಾದ ತಿರುಳು ಎಂದು ತಿಳಿಸಿದರು.
ಎಸ್ ಎಲ್ ವಿ ಕಲರ್ಸ್ ಪ್ರೊಡಕ್ಷನ್ ನಲ್ಲಿ ನಿರ್ಮಾಪಕ ದಿವಾಕರ ದಾಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಾಮದಾಸ್ ಶೆಟ್ಟಿ ಡಿಒಪಿ ರಾಜಶೇಖರ ರಮಾತ್ನಲ್, ಸಂಗೀತ ಮಣಿಕಾಂತ್ ಕದ್ರಿ, ಎಡಿಟಿಂಗ್ ಶ್ರೀಕಾಂತ್ ಕೋ ಡೈರೆಕ್ಟರ್ ಸುಭಾಷ್ ಅರ್ವ. ತಾರಾಗಣದಲ್ಲಿ ಸುಮನ್ ತಲ್ವಾರ್ , ಹರ್ಷಿಕಾ ಪೂಣಚ್ಚ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ, ದತ್ತಣ್ಣ, ಅಶ್ವಿನ್ ಹಾಸನ್, ಯಶ್ ಶೆಟ್ಟಿ, ಶೈನ್ ಶೆಟ್ಟಿ ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ, ರಾಜಶೇಖರ ಶೆಟ್ಟಿ, ಮಂಜುನಾಥ್ ಹೆಗ್ಡೆ ಎಂ.ಕೆ.ಮಠ, ಚಿತ್ಕಲ ಬಿರಾದಾರ್, ಅಂಜಲಿ, ಶೋಭರಾಣಿ, ಶಾಂತಲಾ ಕಾಮತ್ , ಗುರು ಹೆಗ್ಡೆ, ಸಬಿತ ಕಾಮತ್, ಧವಲ್ ಪ್ರಸನ್ನ, ಪ್ರದೀಪ್ ಚಂದ್ರ ಕುತ್ಪಾಡಿ, ಗಿರೀಶ್ ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಷಿಕಾ ಪೂಣಚ್ಚ, ಯಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ಅಶ್ವಿನಿ ಹಾಸನ, ದವಲ್ ದೀಪಕ್, ನಿರ್ಮಾಪಕ ದಿವಾಕರ ದಾಸ ನೇರ್ಲಾಜೆ, ಕಾರ್ಯಕಾರಿ ನಿರ್ಮಾಪಕ ರಾಮ್ ದಾಸ್ ಶೆಟ್ಟಿ ವಿಟ್ಲ, ತಮ್ಮಣ್ಣ ಶೆಟ್ಟಿ, ಬಬಿತಾ ಕಾಮತ್ ಉಪಸ್ಥಿತರಿದ್ದರು.