ಬೆಳ್ತಂಗಡಿ: ಜನತಾದಳ ಜಾತ್ಯಾತೀತ ಪಕ್ಷದ ಬೆಳ್ತಂಗಡಿ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಬೆಳ್ತಂಗಡಿ ತಾಲೂಕಿನ ಪ್ರಮುಖ ನಗರಗಳಲ್ಲಿ ಮತಯಾಚನೆಯ ರೋಡ್ ಶೋ ನಡೆಸಿದರು.ಜೊತೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಜಕೀಯ ಪ್ರಮುಖರ, ಹಿರಿಯ ಕಾರ್ಯಕರ್ತರ ಭೇಟಿ ಮುಂದುವರಿಸಿದರು.
ಮಡಂತ್ಯಾರು, ಮದ್ದಡ್ಕ, ಸಬರಬೈಲು, ಕೊಲ್ಪೆದಬೈಲು, ಕುಪ್ಪೆಟ್ಟಿ, ಕಲ್ಲೇರಿ, ಕರಾಯ, ಗೇರುಕಟ್ಟೆ, ಉಜಿರೆ ಅತ್ತಾಜೆ, ಟಿ.ಬಿ ಕ್ರಾಸ್, ಕಿಲ್ಲೂರು, ಕಾಜೂರು, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಅಣಿಯೂರು, ಬೆಳ್ತಂಗಡಿ ನಗರ, ಮುಂತಾದೆಡೆ ರೋಡ್ ಶೋ ನಡೆಸಿದರು.ಧ್ವನಿವರ್ಧಕದ ಮೂಲಕ ತಾಲೂಕಿನ ಮೂಲೆಮೂಲೆಗಳಲ್ಲಿ ನಿರಂತರ ಪ್ರಚಾರ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿಯಾಗಿರುವ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಸ್ವಪರಿಚಯ ಇರುವ ಕರಪತ್ರ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ನೀಡುವ ಸೌಲಭ್ಯಗಳ ಪ್ರಣಾಳಿಕೆ, ಮಾದರಿ ಮತಪತ್ರಗಳನ್ನು ಹಂಚಿಕೆ ಮಾಡಲಾಯಿತು.ಸೋಮವಾರ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಂಗಳವಾರ ಸಂಜೆಯವರೆಗೂ ಮನೆ ಮನೆ ಭೇಟಿಗೆ ಯೋಜನೆ ರೂಪಿಸಲಾಗಿದೆ.
ಪಕ್ಷದ ಕಾರ್ಯಾಧ್ಯಕ್ಷ ರಾಮ ಆಚಾರಿ, ಸಂಘಟನಾ ಕಾರ್ಯದರ್ಶಿ ಹೆಚ್.ಎನ್ ನಾಗರಾಜ್, ಹಿರಿಯರಾದ ಪ್ರಕಾಶ್ ಹೆಬ್ಬಾರ್ ಅರಸಿನಮಕ್ಕಿ, ಹಿರಿಯ ಸಂಘಟಕರಾದ ಮುಂಡಾಜೆ ಸಹಕಾರಿ ಸಂಘದ ನಿರ್ದೇಶಕ ಸಂಜೀವ ಗೌಡ, ರಾಮಕೃಷ್ಣ ಗೌಡ ನೆರಿಯ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಸಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ಪುನೀತ್ ಪೂಜಾರಿ, ವಸಂತ ಪೂಜಾರಿ, ಅಮ್ಮಿ ನಾಯ್ಕ, ಸಂಜೀವ ಕುಲಾಲ್, ಲುಕ್ಮಾನುಲ್ ಹಕೀಂ ಧರ್ಮಸ್ಥಳ, ಹಂಝ, ಇಬ್ರಾಹಿಂ ಕನ್ಯಾಡಿ, ರಾಮ ಕುಮಾರ್, ರಿಝ್ವಾನ್, ಆಸಿಫ್, ಶರೀಫ್, ಮುಹಮ್ಮದ್ ಕಾಜೂರು, ಸಿರಾಜ್, ಕಿಟ್ಟ, ಮೊದಲಾದವರು ಭಾಗಿಯಾಗಿದ್ದರು.