ಪುಂಜಾಲಕಟ್ಟೆ: ಇಲ್ಲಿಯ ಬಿ.ಪುಂಡಲಿಕ ಬಾಳಿಗಾ & ಸನ್ಸ್ ಜ್ಯವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಉದ್ಘಾಟನೆಯು ಮೇ.3ರಂದು ವಿಸ್ತೃತಗೊಂಡು ನವೀಕೃತ ಮಳಿಗೆ ಉದ್ಘಾಟನೆಗೊಂಡಿದೆ.1937ರಲ್ಲಿ ಪ್ರಾರಂಭ ಗೊಂಡು 8 ದಶಕದಿಂದ ಈ ಸಂಸ್ಥೆ ಜನಮಾನಸದಲ್ಲಿ ಹೆಸರು ಮಾಡಿದ ಸಂಸ್ಥೆಯಾಗಿ ಬೆಳೆದು ನಿಂತಿದೆ.ಸ್ವರ್ನೋದ್ಯಮದಲ್ಲಿ ತನ್ನ ಚಾಪನ್ನೆ ಮೂಡಿಸಿದೆ. ಚಿನ್ನ ಎಂದರೆ ಬಂಗಾರದ ಕಟ್ಟೆ, ಅದೇ ಪುಂಜಾಲಕಟ್ಟೆಯ ಪುಂಡಲಿಕ ಬಾಳಿಗಾರವರು ಪ್ರಾರಂಭಿಸಿದ ಈ ಸಂಸ್ಥೆ.ಎಲ್ಲರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿ ಮೂಡಿ ಬಂದಿದೆ.ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತವಾದ ನೂತನ ವಿಸ್ತೃತ ನವೀಕೃತ ಮಳಿಗೆ ಉದ್ಘಾಟನೆಗೊಂಡಿದೆ.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರುಗಳಾದ ಜಗದೀಶ್ ಬಾಳಿಗಾ, ರಾಜಾರಾಮ್ ಬಾಳಿಗಾ, ನರೇಂದ್ರ ಬಾಳಿಗಾ, ದಿನೇಶ್ ಪೈ ಮತ್ತು ಪ್ರಭಾ ಡಿ.ಪೈ, ಗೋವಿಂದರಾಯ ಪ್ರಭು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ದೀಪ ಬೆಳಗಿಸಿ ಶುಭ ಹಾರೈಸಿದರು.
ಬಿ.ಪುರುಷೋತ್ತಮ ಬಾಳಿಗಾ, ಬಿ.ರವೀಂದ್ರ ಬಾಳಿಗಾ, ಬಿ.ಪ್ರಶಾಂತ ಬಾಳಿಗಾ ಅಥಿತಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿ, ಸರ್ವರ ಸಹಕಾರ ಕೋರಿದರು.