


ಗೇರುಕಟ್ಟೆ: ಕಳಿಯ ಗ್ರಾಮ ಬೂತ್ ಸಂಖ್ಯೆ 151 ವತಿಯಿಂದ ಮನೆ,ಮನೆಗೆ ತೆರಳಿ ಮತಯಾಚನೆ ಅಭಿಯಾನ ಹಾಗೂ ಪ್ರಣಾಳಿಕೆ ಪತ್ರ ನೀಡುವ ಮೂಲಕ ಎ.30 ರಂದು ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮದ ಬೂತ್ ಅಧ್ಯಕ್ಷ ದಿನೇಶ್ ಗೋವಿಂದೂರು,ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ಸುಧಾಕರ ಮಜಲು,ಯಶೋಧರ ಶೆಟ್ಟಿ ಕೊರಂಜ, ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರಾದ ದಯಾರಾಜ ಕೆ.ಪಿ.,ಬಾಲಕೃಷ್ಣ ಮಜಲು,ರಾಜೇಶ್ ಪರಿಮ,ಅಭಿಷೇಕ್ ಕುಲ್ಲುಂಜ,ಹರೀಶ್ ಸಂಬೋಳ್ಯ, ಗಣೇಶ್ ಕೆ.ಬಿ.ರೋಡ್,ವಿಭುದೇಂದ್ರ ಆಳ್ವ ಕೊರಂಜ,ನವೀಣ್ ಶೆಟ್ಟಿ ಅಲಕೆದಡ್ಡ, ಉಪಸ್ಥಿತರಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.