


ಉಜಿರೆ: ಹಲವಾರು ವ್ಯಕ್ತಿಗಳ ಡ್ರೈವಿಂಗ್ ಗುರು ಉಜಿರೆಯ ಪ್ರಖ್ಯಾತ ಪದ್ಮಾಂಬ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಉಮೇಶ್ ಕಲ್ಲೂರಾಯ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ.
ಇವರು ತಾಯಿ, ಪತ್ನಿ, ಇಬ್ಬರು ಪುತ್ರಿ, ಸಹೋದರ, ಸಹೋದರಿ ಹಾಗೂ ಅಪಾರ ಶಿಷ್ಯವೃಂದ ಹಾಗೂ ಕುಟುಂಬಸ್ಥರು, ಸ್ನೇಹಿತರನ್ನು ಅಗಲಿದ್ದಾರೆ.