ಹಿಂದೂ ಜನಜಾಗೃತಿ ಸಮಿತಿಯಿಂದ ಗದಾ ಪೂಜೆ

0

ಉಜಿರೆ : ಹನುಮಾನ್ ಜಯಂತಿಯ ನಿಮಿತ್ತ ಹಿಂದೂ ಜನ ಜಾಗೃತಿ ಸಮಿತಿ ಮತ್ತು ಸಮವಿಚಾರಧಾರಿ ಹಿಂದುತ್ವ ನಿಷ್ಠ ಸಂಘಟನೆಗಳ ವತಿಯಿಂದ ದೇಶಾದ್ಯಂತ 760 ಕಡೆಗಳಲ್ಲಿ ಗದಾ ಪೂಜೆ ಮಾಡಲಾಗುತ್ತಿದ್ದು ಬೆಳ್ತಂಗಡಿ ತಾಲೂಕಿನ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬಳ್ಳ ಮಂಜ ಕುತ್ತಿನ, ಶ್ರೀ ರಾಮಾಂಜನೇಯ ದೇವಸ್ಥಾನ ಪಿಲಿಗೂಡು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆಲತ್ತಿ ಮಾರು ಬಂದಾರು, ಮಾರ್ಥಾಜೆ ಗುತ್ತು ಸಜೀಪ ಬಂಟ್ವಾಳ, ಶ್ರೀ ವೀರಾಂಜನೇಯ ಮಂದಿರ ಉಳ್ಳಾಲ ಮಂಗಳೂರುನಲ್ಲಿ ಗದಾ ಪೂಜೆಮಾಡಲಾಯಿತು.


ಶಂಖನಾದದಿಂದ ಪೂಜೆಯು ಪ್ರಾರಂಭವಾಯಿತು. ತದನಂತರ ಸಾಮೂಹಿಕ ಪ್ರಾರ್ಥನೆ, ಗದೆ ಪೂಜೆ, ಶ್ರೀ ಹನುಮಂತನ ಆರತಿ ಹಾಗೂ ಸ್ತೋತ್ರ ಮತ್ತು ಶ್ರೀ ಹನುಮತೇ ನಮಃಈ ಸಾಮೂಹಿಕ ನಾಮಜಪ ಮಾಡಲಾಯಿತು.


ಧರ್ಮ ಸಂಸ್ಥಾಪನೆಗಾಗಿ ಮಾರುತಿ ರಾಯನ ಗುಣವನ್ನು ನಾವು ಯಾವ ರೀತಿ ಅಳವಡಿಸಿಕೊಳ್ಳುವುದು, ಇದಕ್ಕಾಗಿ ಮಾರ್ಗದರ್ಶನ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಲಾಯಿತು.
ಹಿಂದುಗಳ ಪ್ರತಿಯೊಂದು ದೇವತೆಯ ರೂಪ ನೋಡಿದರೆ ಕೇವಲ ಒಂದು ಕೈ ಆಶೀರ್ವಾದ ನೀಡುತ್ತದೆ ಹಾಗೂ ಇತರ ಎಲ್ಲಾ ಕೈಗಳಲ್ಲಿ ವಿವಿಧ ರೀತಿಯ ಅಸ್ತ್ರ ಶಸ್ತ್ರಗಳು ಇವೆ. ಈ ದೃಷ್ಟಿಯಿಂದ ದೇವತೆಗಳ ಶಸ್ತ್ರಗಳ ಪೂಜೆ ಮಾಡಿದರೆ ಹಿಂದೂಗಳಲ್ಲಿ ಶೌರ್ಯ ಜಾಗೃತವಾಗಲೂ ಸಹಾಯವಾಗುವುದು.


ಈ ವರ್ಷ ಶ್ರೀ ರಾಮನವಮಿಯ ಮೆರವಣಿಗೆಗಳ ಮೇಲೆ ಅನೇಕ ರಾಜ್ಯಗಳಲ್ಲಿ ದಾಳಿಗಳು ನಡೆದಿವೆ.ಹಿಂದೂಗಳನ್ನು ಗುರಿ ಮಾಡಲಾಯಿತು.ಈ ಗದಾ ಪೂಜೆಗಳ ಮೂಲಕ ಮತ್ತೊಮ್ಮೆ ಹಿಂದೂಗಳಿಗೆ ಬಲ ಸಿಗಬೇಕು.ಹಿಂದೂಗಳಲ್ಲಿನ ಶೌರ್ಯ ಜಾಗೃತವಾಗಬೇಕು.ಅದಕ್ಕಾಗಿ ಹಬ್ಬ ಉತ್ಸವದ ಸಮಯದಲ್ಲಿ ಶಸ್ತ್ರ ಪೂಜೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಯೋಗೀಶ ಕೆಂಬರ್ಜೆ ಹೇಳಿದರು.
ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು, ಊರಿನ ಮಹನೀಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here