ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ಹಣ್ಣು ಹಂಪಲು ಕೃಷಿಕರಾದ ಅನಿಲ್ ಬಳಂಜರವರ ಕೃಷಿತೋಟದ ಸಂದರ್ಶನ ಆಯೋಜನೆಗೊಂಡಿತು.
ಆಸ್ಟ್ರೇಲಿಯಾ, ಸಿಂಗಾಪುರ, ಬ್ರೆಜಿಲ್, ಥಾಯ್ಲ್ಯಾಂಡ್, ಮಲೇಶಿಯಾ, ಅಮೇರಿಕಾ, ಆಫ್ರಿಕಾ, ಶ್ರೀಲಂಕಾ ಮೊದಲಾದ ವಿದೇಶೀ ತಳಿಗಳ ಜೊತೆಗೆ ಸ್ವದೇಶೀ ತಳಿಗಳೂ ಸರಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲುಗಳ ಕೃಷಿಯನ್ನು ಮಾಡಿರುವ ಅನಿಲ್ ರವರ ಮಾದರಿ ತೋಟ ವೀಕ್ಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಬಳಂಜ ಫಾರ್ಮ್ ನ ಮ್ಯಾನೇಜರರಾದ ರಾಜ್ ನಾರಾಯಣರವರು ಮಾಹಿತಿ ನೀಡಿದರು.
ಭೇಟಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಶಿಕ್ಷಕರಾದ ರಾಜಶ್ರೀ, ಕೃಷ್ಣಾನಂದ, ರವಿಚಂದ್ರ , ಚಿತ್ರಾ ಪಿ.ಎಚ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ, ಸದಸ್ಯರಾದ ಶೇಖರ್ ಕೊಲ್ಲಿಮಾರು, ಸುರೇಶ್ ಕನಿಕ್ಕಿಲರವರು ಜೊತೆಗಿದ್ದರು.