ನೆರಿಯ :ಸಂತ ತೋಮಸರ ದೇವಾಲಯದ ವತಿಯಿಂದ ವಿಭಿನ್ನ ರೀತಿಯಲ್ಲಿ ಪಾಸ್ಕ ಕಾಲದಲ್ಲಿ ಆಚರಣೆಗೆ ಜನರು ಸಿದ್ದರಾರಾಗುತ್ತಿರುವುದು ವರದಿಯಾಗಿದೆ.ಪ್ರಾರ್ಥನೆ ಯೊಂದಿಗೆ ಸಮಾಜ ಸೇವೆಯನ್ನು ಸೇರಿಸಿಕೊಂಡಿರುವುದು ವಿಶೇಷ ವಾಗಿದೆ. ಕಳೆದ ಮಳೆಗಾಲದಲ್ಲಿ ಇದ್ದಂತಹ ಮನೆಯ ಗೋಡೆ ಅಂಶಿಕವಾಗಿ ಬಿದ್ದು ಹೋಗಿ ವಾಸಯೋಗ್ಯ ವಲ್ಲದಂತಾಗಿತ್ತು.ಮನೆಯ ಮರು ನಿರ್ಮಾಣ ವನ್ನು ಚರ್ಚಿನ ವತಿಯಿಂದ ಸಾರ್ವಜನಿಕ ಸಹಕಾರದಲ್ಲಿ ನಿರ್ಮಾಣ ಪ್ರಾರಂಭವಾಗಿದೆ.
ನಿರ್ಮಾಣಕ್ಕೆ ಗಂಡಿಬಾಗಿಲು ಸಂತ ತೋಮಸರ ದೇವಾಲಯದ ಧರ್ಮ ಗುರುಗಳು ಹಾಗೂ ಪ್ರಾಂತಿಯ ಕೆ ಎಸ್ ಎಂ ಸಿ ಎ ನಿರ್ದೇಶಕರು ಆದ ವಂದನಿಯ ಫಾ| ಶಾಜಿ ಮಾತ್ಯು ಚಾಲನೆ ನೀಡಿದರು. ಸ್ಥಳೀಯರ ಜೊತೆಯಲ್ಲಿ ಕಂಕನಾಡಿ ಸಂತ ಅಲ್ಫೋನ್ಸ ದೇವಾಲಯದ ಎಸ್ ಎಂ ವೈ ಎಂ ಸದಸ್ಯರು ಸಾಥ್ ನೀಡಿದರು. ಮುಂಗಾರುವಿಗೆ ಮುಂಚಿತವಾಗಿ ನಿರ್ಮಾಣ ಪೂರ್ಣಗೊಳಿಸಿ. ಮನೆಯನ್ನು ಹಸ್ತಾಂತರಿಸುವ ಉದ್ದೇಶ ಹೊಂದಿದೆ ಎಂದರು.
p>