ವೇಣೂರು: ಉಳ್ತೂರಿನಲ್ಲಿ ದರ್ಸ್ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್

0

ವೇಣೂರು ಸಮೀಪದ ಉಳ್ತೂರಿನಲ್ಲಿ ಬಹು ಸಾದಾತ್ ತಂಙಳ್ ರವರ ತಾಯಿ ಸೆಯ್ಯಿದತ್ ಹಲೀಮ ಬೀವಿಯವರ ಹೆಸರಿನಲ್ಲಿ ಸ್ಥಾಪಿಸಿದ ನೂರುಲ್ ಹುದಾ ದರ್ಸ್ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಮತ್ತು ದರ್ಸ್ ಕಲಿಕೆ ಪೂರ್ಣಗೊಳಿಸಿ ಕಾಲೇಜಿಗೆ ತೆರಳುತ್ತಿರುವ 6 ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾ. 19 ರಂದು ಉಳ್ತೂರಿನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ನೇತ್ರತ್ವವನ್ನು ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಉಪಖಾಝಿ ಸೆಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ವಹಿಸಿದ್ದರು.

ಬುರ್ದಾ ನೇತೃತ್ವವನ್ನು ತ್ವಾಹ ತಂಙಳ್‌ ವಹಿಸಿದರು.

ಕೇರಳದ ಜಲ್ವಾಎ ಮದೀನಾ ಟೀಂ ವತಿಯಿಂದ ಆಕರ್ಷಕ ಕವಾಲಿ ಹಾಗೂ ಶಿಹಾನ್ ಉಳ್ಳಾಲ ಮತ್ತು ಅಯಾನ್ ಅರಸೀಕೆರೆ ನಅತ್ ಆಲಾಪಸಿದರು.

ಕಾರ್ಯಕ್ರಮದಲ್ಲಿ ಸೆಯ್ಯಿದ್ ಶರಫುದ್ದೀನ್ ತಂಙಳ್ ಪಡ್ಡಂದಡ್ಕ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಹಾಫಿಝ್ ಮಜೀದ್ ಫಾಳಿಲಿ ಶೆರೀಫ್ ಸಅದಿ ಕಿಲ್ಲೂರು ಮಸೀದಿ ಅಧ್ಯಕ್ಷರಾದ ಬಿ.ಎಸ್ ಮುಹಮ್ಮದ್ ಹಾಜಿ ದರ್ಸ್ ಸಮಿತಿ ಅಧ್ಯಕ್ಷ ಸೆಯ್ಯಿದ್ ಹಸನ್ ಸೇರಿದಂತೆ ಹಲವಾರು ಸಾದಾತ್ ಗಳು ಆಲಿಂಗಳು ಊರಿನ ಹಿರಿಯರು ಕಿರಿಯರು ಸಹೋದರ ಸಹೋದರಿಯರು ಭಾಗವಹಿಸಿದ್ದರು. ಅಬ್ಬಾಸ್ ಉಳ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here