ಬೆಳ್ತಂಗಡಿ :ಕುದುರೆಮುಖ ರಾಷ್ಟ್ರೀಯ ಅರಣ್ಯ ಮೀಸಲು ಪ್ರದೇಶದಲ್ಲಿನ ಮಲೆಕುಡಿಯ ಆದಿವಾಸಿಗಳು ಪ್ರಸ್ತುತ ಜೀವನ ಪರಿಸ್ಥಿತಿಯನ್ನು ತಿಳಿಯಲು ಅನ್ವೇಷಣೆಗಾಗಿ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಬುಡಕಟ್ಟು ಗ್ರಾಮ ನಾವೂರು ಮತ್ತು ಕುತ್ಲೂರಿಗೆ ಯುವ ರೈತ ಘಟಕ ತಂಡ ಭೇಟಿ ನೀಡಿದರು.
ಮಲೆಕುಡಿಯ ಆದಿವಾಸಿಗಳು ಈ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಮೂಲಭೂತ ಸೌಕರ್ಯದ ಸಮಸ್ಯೆಗಳು ನಿಜವೆಂದು ಗಮನಿಸಿದರು. ನಾರವಿ, ಸುಲ್ಕೇರಿಮೊಗ್ರು, ಶಿರ್ಲಾಲು, ಸವಣಾಲು, ನಡ, ಮಲವಂತಿಗೆ, ಮಿತ್ತಬಾಗಿಲು, ನಾವರ, ಅಳದಂಗಡಿ ಪರಿಸರದಲ್ಲೂ ಸಮಸ್ಯೆ ಇರುವುದಾಗಿ ಅದಿವಾಸಿಗಳು ರೈತ ಸಂಘದ ಮುಖಂಡರಿಗೆ ತಿಳಿಸಿದರು.
ಈ ಭೇಟಿ ವೇಳೆ ರೈತ ಸಂಘ ತಂಡದಲ್ಲಿ ರಾಜ್ಯ ಸಂಚಾಲಕ ಹಾಗೂ ಜಿಲ್ಲಾಧ್ಯಕ್ಷ ಆದಿತ್ಯ ಕೊಲ್ಲಾಜೆ, ಸುರೇಂದ್ರ ಕೋರ್ಯ, ಶಿವಾನಂದ ಬಿ.ಸಿ.ರೋಡ್, ಅವಿನಾಶ್, ದೇವಪ್ಪ, ಉಮೇಶ ಹಾಗೂ ಕಾರ್ಮಿಕ ಸಂಘದ ಮುಖಂಡ ರಾಮಣ್ಣ ವಿಟ್ಲ ಹಾಜರಿದ್ದರು.
p>