ವೇಣೂರು ಕ್ರಿಸ್ತರಾಜದಲ್ಲಿ ಶೌಚಾಲಯ ಉದ್ಘಾಟನೆ

0

ವೇಣೂರು : ಅಲ್ಪಸಂಖ್ಯಾತರ ಶ್ರೇಯೋಭಿವ್ರಧ್ದಿ ನಿಟ್ಟಿನಲ್ಲಿ ರಾಜ್ಯ ಸಕಾ೯ರ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಇದೀಗ ವೇಣೂರು ಕ್ರೈಸ್ತ ಬಾ೦ಧವರ ಬೇಡಿಕೆಯ೦ತೆ ಕ್ರಿಸ್ತರಾಜ ದೇವಾಲಯದ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ ನೀಡುವ ಭರವಸೆಯನ್ನು ಶಾಸಕ ಹರೀಶ್ ಪೂ೦ಜ ನೀಡಿದರು.

ವೇಣೂರು ಕ್ರಿಸ್ತರಾಜ ದೇವಾಲಯದಲ್ಲಿ ಶಾಸಕರ ಪ್ರದೇಶಾಭಿವ್ರದ್ದಿ ನಿಧಿಯಲ್ಲಿ ನಿಮಿ೯ಸಲಾದ ನೂತನ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಚಿ೯ನ ಧರ್ಮಗುರುಗಳಾದ ವ೦ದನೀಯ ಪೀಟರ್ ಆರನ್ಹಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ೦ಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಉಪಾಧ್ಯಕ್ಷೆ ಪುಷ್ಪ ಡಿ. ಅಕ್ರಮ ಸಕ್ರಮ ಸಮಿತಿಯ ಸದಸ್ಯ ಜಯಂತ್ ಕೋಟ್ಯಾನ್, ಚಚ್೯ ಪಾಲನಾ ಪರಿಷತ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ಕಾಯ೯ದಶಿ೯ ಜೆತ್ರುಡ್ ಡಿಸೋಜ, ಕರಿಮಣೇಲು ಭಾಗದ ಪ೦ಚಾಯತ್ ಸದಸ್ಯ ಅರುಣ್ ಹೆಗ್ಡೆ ಹಾಗೂ ಜಿನ್ನು ಉಪಸ್ಥಿತರಿದ್ದರು. ಈ ವೇಳೆ ಅನುದಾನ ಒದಗಿಸಿದ ಶಾಸಕರನ್ನು ಹಾಗೂ ಗುತ್ತಿಗೆದಾರ ಪ್ರತೀಶ್ ಪೂಜಾರಿ ಅವರನ್ನು ಚಚ್೯ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಮ ಪ೦ಚಾಯತ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಅರುಣ್ ಕ್ರಾಸ್ತ ಸ್ವಾಗತಿಸಿ, ಪ೦ಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ಕಾಯ೯ಕ್ರಮ ನಿರೂಪಿಸಿ, ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ ವ೦ದಿಸಿದರು.

LEAVE A REPLY

Please enter your comment!
Please enter your name here