ಅಗಲಿದ ಉಜಿರೆಯ ವಿಜಯರಾಘವ ಪಡುವೆಟ್ನಾಯರಿಗೆ ನುಡಿನಮನ ,ಶ್ರದ್ಧಾಂಜಲಿ

0

ಉಜಿರೆ: ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದ್ದ  ವಿಜಯರಾಘವ ಪಡುವೆಟ್ನಾಯರದ್ದು ಅಜಾತಶತ್ರು ವ್ಯಕ್ತಿತ್ವ.ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ,ಸಾಮಾಜಿಕ ಕ್ಷೇತ್ರಗಳಲ್ಲಿ   ವಸ್ತುನಿಷ್ಠ ಮಾರ್ಗದರ್ಶನ ನೀಡುತ್ತಿದ್ದ ಅವರು ಆದರ್ಶ ಪ್ರಾಯ ವ್ಯಕ್ತಿ.ಅವರ ವ್ಯಕ್ತಿತ್ವವೇ ನಮಗೆ ಪ್ರೇರಣೆ . ಅವರ ಪ್ರೇರಣಾ ದಾಯಿ ವ್ಯಕ್ತಿತ್ವ ,ತತ್ವಗಳನ್ನು ಅಳವಡಿಸಿಕೊಂಡರೆ ನಮ್ಮ  ಜೀವನ ಸಾರ್ಥಕ ವಾಗುತ್ತದೆ.ಅವರು ಸಾಕ್ಷಾತ್ ಮಾತನಾಡುವ ಜನಾರ್ದನ . ಅವರ ಆತ್ಮ ಜನಾರ್ದನ ಸ್ವಾಮಿಯಲ್ಲಿ ಲೀನವಾಗಿದೆ. ಅವರ ನೆನಪು ನಮ್ಮ  ಹೃದಯದಲ್ಲಿ  ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.                                                               

ಅವರು ಮಾ 3 ರಂದು  ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ಅಗಲಿದ,ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ,ಉಜಿರೆಯ ಧಣಿ ಎಂದೇ ಖ್ಯಾತಿವೆತ್ತ ಯು.ವಿಜಯರಾಘವ ಪಡುವೆಟ್ನಾಯರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.


 ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ,  ಉಜಿರೆ ಎಸ್ ಡಿ ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ! ಸತೀಶ್ಚಂದ್ರ ಎಸ್ , ನ್ಯಾಯವಾದಿ ಬಿ.ಕೆ.ಧನಂಜಯ ರಾವ್ , ಕ. ಸಾ. ಪ.  ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಸೈಂಟ್ ಆಂಟನಿ ಚರ್ಚಿನ ಧರ್ಮಗುರು ಫಾ.ಜೇಮ್ಸ್ ಡಿಸೋಜಾ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ,ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅಡೂರು ವೆಂಕಟ್ರಾಯ ನುಡಿ ನಮನ ಸಲ್ಲಿಸಿದರು.


 ನಿವೃತ್ತ ಉಪನ್ಯಾಸಕ ಪ್ರಕಾಶ್ ಪ್ರಭು ಮತ್ತು ಜಯಲಕ್ಷ್ಮಿ ಸ್ವರಚಿತ ಕವನಗಳ  ಗೀತ ನಮನ ಸಲ್ಲಿಸಿದರು. ವಿ.ಪ.ಸದಸ್ಯ ಹರೀಶ್ ಕುಮಾರ್, ರಕ್ಷಿತ್ ಶಿವರಾಂ,ಸಂಪತ್ ಸುವರ್ಣ ,  ಎಸ್.ಕೆ  ಡಿ ಆರ್ ಡಿ ಪಿ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ! ಎಲ್.ಎಚ್. ಮಂಜುನಾಥ್,ಉಜಿರೆ ಎಸ್ ಡಿಎಂ ಆಸ್ಪತ್ರೆಯ ನಿರ್ದೇಶಕ ಜನಾರ್ದನ್,ಎಸ್ ಡಿ ಎಂ ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ಪ್ರೊ ! ದಿನೇಶ್ ಚೌಟ,ಹಿರಿಯ ಮುತ್ಸದ್ದಿ ಭುಜಬಲಿ ಧರ್ಮಸ್ಥಳ,ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಮೋಹನ್ ನಾರಾಯಣ್,ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ,ಡಾ.ಕುಮಾರ ಹೆಗ್ಡೆ ಬಿ.ಎ. ಮೋಹನ ಶೆಟ್ಟಿಗಾರ್ ,ಶ್ರೀಕರ ಮರಾಠೆ ,ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿ ರ್ದೇಶಕ ಕೆ. ಎನ್.  .ಜನಾರ್ದನ್, ಕಾಲೇಜು   ಉಪನ್ಯಾಸಕರು,ಶಿಕ್ಷಕರು,ಸಹಸ್ರಾರು ಅಭಿಮಾನಿಗಳು,ಉಜಿರೆಯ ನಾಗರಿಕರು ,  ಮತ್ತಿತರರು ಭಾಗವಹಿಸಿದ್ದರು.

ಅಗಲಿದ ವಿಜಯರಾಘವ ಪಡುವೆಟ್ನಾಯರಿಗೆ  ಸಭೆಯಲ್ಲಿ  ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. 
ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ನೆರವಾದವರನ್ನು ಸ್ಮರಿಸಿಕೊಂಡರು.  ಪಡುವೆಟ್ನಾಯರ ಕುಟುಂಬ ವರ್ಗ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. 

ರಾಜಪ್ಪ ನೇಕಾರ ,ಪ್ರಭಾತ್ ನೇಕಾರ  ಸಿದ್ಧಪಡಿಸಿ  ಕೇಶವ ದೇವಾಡಿಗ  ಧ್ವನಿ ನೀಡಿ ಅಕ್ಷ ಡಿಜಿಟಲ್ ಕ್ರಿಯೇಷನ್ಸ್ ಮೂಲಕ  ಹೊರತಂದ  ವಿಜಯರಾಘವ ಪಡುವೆಟ್ನಾಯರ ಕುರಿತು “ಧರ್ಮಭೂಷಣ “ಆಡಿಯೋವನ್ನು ಶಾಸಕ ಹರೀಶ್ ಪೂಂಜ ಮತ್ತು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್  ಬಿಡುಗಡೆಗೊಳಿಸಿದರು. ಕಲಾವಿದ ಯಾದವ ಆರ್ಟ್ಸ್ ನ ಯಾದವ ರಚಿಸಿದ ಪಡುವೆಟ್ನಾಯರ ಭಾವಚಿತ್ರವನ್ನು ಶರತ್ ಕೃಷ್ಣ ಪಡುವೆಟ್ನಾಯರಿಗೆ ಅರ್ಪಿಸಿದರು.

p>

LEAVE A REPLY

Please enter your comment!
Please enter your name here