ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಫೆ.25ರಂದು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡನ್ ಪೊವೆಲ್ ರವರ ಜನುಮ ದಿನವನ್ನು ರಾಷ್ಟ್ರೀಯ ಚಿಂತನಾ ದಿನಾಚರಣೆಯಾಗಿ ಆಚರಿಸಲಾಯಿತು.
ಸ್ಕೌಟ್ ಗೈಡ್ಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ. ಫಾ| ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳು ಸ್ಕೌಟ್ ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಗುಣಗಳನ್ನು ಬೆಳೆಸಿ, ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕೆಂದು ಶುಭನುಡಿದು ಆಶೀರ್ವದಿಸಿದರು. ವಿದ್ಯಾರ್ಥಿಗಳು ಸಮಾಜ ಸೇವೆ, ಭ್ರಾತೃತ್ವ, ಪರಿಸರ ಸಂರಕ್ಷಣೆ, ದೇಶ ಪ್ರೇಮವನ್ನು ಬಿಂಬಿಸುವ ಉತ್ತಮ ಮೌಲ್ಯಗಳನ್ನು ನೃತ್ಯ ಹಾಗೂ ನಟನೆಯ ಮೂಲಕ ಪ್ರಸ್ತುತಪಡಿಸಿದರು. ಸ್ಕೌಟ್ ಮಾಸ್ಟರ್ ಶ್ರೀಮತಿ ಬ್ಲೆಂಡಿನ್ ರೊಡ್ರಿಗಸ್ ಚಿಂತನಾ ದಿನಾಚರಣೆ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿನಿ ಮಿನಾಲ್ ಜೋಸೆಫ್ ಅಂತರಾಷ್ಟ್ರೀಯ ಜಾಂಬೂರಿಯ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ಡಿಯೋನ್ ಡಿಸೋಜ ಸ್ವಾಗತಿಸಿ, ವಿಭಿಶಾ ವಂದಿಸಿದರು. ಯಶಸ್ವಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಬ್ಲೆಂಡಿನ್ ರೊಡ್ರಿಗಸ್, ಶ್ರೀಮತಿ ಅನಿತಾ, ಶ್ರೀಮತಿ ಶಾಂತಿ ಪಿರೇರಾ, ಶ್ರೀಮತಿ ಎಲ್ವಿಟಾ ಪಾಯ್ಸ್ ಹಾಗೂ ಶ್ರೀಮತಿ ಅಖಿದಾ ಬಾನು ಸಹಕರಿಸಿದರು.