ಕಳಿಯ : ಇಲ್ಲಿಯ ಶ್ರೀ ದುರ್ಗಾ ಭಜನಾ ಮಂಡಳಿ ವಾರ್ಷಿಕೋತ್ಸವ ಅಂಗವಾಗಿ ಭಜನೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಫೆ.26 ರಂದು ಮಂಡಳಿ ವಠಾರದಲ್ಲಿ ಜರುಗಿತು.
ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಮೊಕ್ತೇಸರರಾದ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡುತ್ತಾ ಸಮಾಜದ ಪ್ರತಿಯೊಬ್ಬರು ಜಾತಿ-ಧರ್ಮ ಮರೆತು ಎಲ್ಲಾರು ಒಂದೇ ಎನ್ನುವ ಭಾವನೆ ಮೂಡುವುದು ದೇವಸ್ಥಾನ, ಭಜನಾ ಮಂದಿರ ಮೂಲಕ ಉತ್ತಮ ಸಮಾಜ ನಿರ್ಮಾಣವಾಗುವುದು ಆಗ ಮಾತ್ರ ಧರ್ಮದ ಆಚರಣೆ ನಡೆಯುತ್ತದೆ ಎಂದು ಧಾರ್ಮಿಕ ಉಪನ್ಯಾಸ ನೀಡಿದರು.
ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುರೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಭಜನಾ ಮಂಡಳಿ ಅಧ್ಯಕ್ಷ ವಿನೋದ್ ಗೌಡ ಹೀರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಭಜನಾ ಮಂಡಳಿಗೆ ಕೊಡುಗೆ ನೀಡಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಿದರು.
ಪೂರ್ವಾಹ್ನ ಗಣಹೋಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ನಿವೃತ್ತ ಅಂಚೆ ಪಾಲಕ ಕೂಸಪ್ಪ ಗೌಡ ಹೀರ್ಯ ಉದ್ಘಾಟನೆ ಮಾಡಿದರು. ಕಳಿಯ ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ, ರಕ್ತೇಶ್ವರಿಪದವು ಮಂಜುನಾಥೇಶ್ವರ, ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿವರಣೆ ನಡೆಯಿತು. ವಿವಿಧ ಸಂಘದ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಂಚಾಯತು ,ಉಪಾಧ್ಯಕ್ಷರು, ಸದಸ್ಯರು, ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಭಾಗವಹಿಸಿದರು.
ಜಗದೀಶ್ ಗೌಡ ಹೀರ್ಯ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಗೌಡ ಕಲ್ಕುರ್ಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಗೌರವ ಸಲಹೆಗಾರರಾದ ಡಾಕಯ್ಯ ಗೌಡ ಹೀರ್ಯ ಧನ್ಯವಾದವಿತ್ತರು.